ಚೆಟ್ಟಳ್ಳಿ, ಸೆ, 25 : ರೈತರು ಸಂಕಷ್ಟದಲ್ಲಿದ್ದು, ಸರಕಾರವು ಸಾಲ ಮನ್ನಾ ಮಾಡುವ ಮೂಲಕ ಕಾಪಾಡ ಬೇಕೆಂದು ಚೆಟ್ಟಳ್ಳಿಯ ಸಹಕಾರ ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ನಡೆದ ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಸಂಘದಲ್ಲಿ 941.51 ಲಕ್ಷ ಠೇವಣಿ ಹೊಂದಿದ್ದು 699.39ಲಕ್ಷ ಕ್ರಷಿ ಸಾಲ,21.90ಲಕ್ಷ ಅಸಾಮಿ ಸಾಲ, 88.53 ಲಕ್ಷ ಕರಿಮೆಣಸು ಅಡವುಸಾಲ, 9.75 ಲಕ್ಷ ವಾಹನಸಾಲ, 66.83 ಠೇವಣಿ ಸಾಲ, 2.38 ಲಕ್ಷ ಪಿಗ್ಮಿ ಸಾಲ, 10.75 ಲಕ್ಷ ಸ್ವಸಹಾಯ ಸಂಘ ಸಾಲ, 30.98ಲಕ್ಷ ವ್ಯಾಪಾರ ಸಾಲ, 3ಲಕ್ಷ ಭವಿಷ್ಯನಿಧಿ ಸಾಲ, 171.55ಲಕ್ಷ ಜಾಮೀನು ಸಾಲ, 70 ಸಾವಿರ ವಿದ್ಯಾಭ್ಯಾಸ ಸಾಲ, 3.08 ಲಕ್ಷ ಗೊಬ್ಬರ ಸಾಲ ಒಟ್ಟು ಸೇರಿ 637.90 ಲಕ್ಷ ವಿತರಣೆ ಮಾಡಿರುವ ಬಗ್ಗೆ ಹಾಗೂ ಕಳೆದ ಸಾಲಿನಲ್ಲಿ ಶೇ. 100 ರಷ್ಟು ಕೆಸಿಸಿ ಸಾಲ ವಸೂಲಿ ಮಾಡಲಾಗಿದ್ದು ಲಾಭ 13.35 ಲಕ್ಷ ಗಳಿಸಿರಿವ ಬಗ್ಗೆ ವಿವರಿಸಿದರು. ಇದರಿಂದ ಜಿಲ್ಲಾಬ್ಯಾಂಕಿನಿಂದ ಸತತವಾಗಿ ಸಂಘಕ್ಕೆ ಪ್ರಶಸ್ತಿ ಬಂದಿವೆ. ಮುಂದೆ ರಾಜ್ಯ ಮಟ್ಟದಲ್ಲಿ ಹೆಸರುಗಳಿಸು ಗುರಿಯನ್ನು ಹೊಂದಿದ್ದೇವೆ ಎಂದರು. ರೈತರಿಗೆ ಶೇ.8ರ ಡಿವಿಡೆಂಟನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
ಸದಸ್ಯರ ಪ್ರತಿಭಾವಂತ 10 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಆಭರಣ ಸಾಲ 10 ಲಕ್ಷ ಬದಲಾಗಿ 15 ಲಕ್ಷ ,ಕಾಫಿ ಒಳ್ಳೆಮೆಣಸು ಸಾಲ 7 ಲಕ್ಷಕ್ಕೆ ಬದಲಾಗಿ 10 ಲಕ್ಷಗಳು ಹಾಗೂ ಜಾಮೀನು ಸಾಲ 1 ಲಕ್ಷಕ್ಕೆ ಬದಲಾಗಿ 1.50 ಲಕ್ಷ ನೀಡುವ ಬಗ್ಗೆ ಬೈಲಾ ತಿದ್ದುಪಡಿ ಮಾಡಿ ಸಭೆಯ ಅನುಮತಿಪಡೆದರು.ಎ.ಸಿ ರಾಘವಯ್ಯ ರತ್ತುಚಂಗಪ್ಪ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳು, ಆರ್ಥಿಕ ಪ್ರತಿನಿಧಿ ನವೀನ್ ಕುಮಾರ್, ಆಂತರಿಕ ಲೆಕ್ಕಪರಿಶೋಧಕರು ಹಾಗೂ ಸಲಹೆಗಾರರು ಹೆಚ್.ಬಿ.ರಮೇಶ್ ಹಾಜರಿದ್ದರು. ಕೆ.ಎಸ್. ನಂದಿನಿ ಪ್ರಾರ್ಥಿಸಿ ಸಂಘದ ಉಪಾಧ್ಯಕ್ಷ ಹೆಚ್.ಎಸ್ ತಿಮ್ಮಪ್ಪಯ್ಯ ವಂದಿಸಿದರು.