ಸೋಮವಾರಪೇಟೆ, ನ. 20: ಇಲ್ಲಿನ ಬ್ರಾಹ್ಮಣ ಸಮಾಜ, ಸೋಮೇಶ್ವರ ದೇವಾಲಯದ ಸನ್ನಿಧಿಯಲ್ಲಿ ನಾಗ ಪ್ರತಿಷ್ಠಾಪನೆ ಹಾಗೂ ರುದ್ರಾಕ್ಷೇಶ್ವರ ಮೂರ್ತಿಯು ಉದ್ಘಾಟನೆಗೊಂಡ ಆರನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ದಿನದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ವಿಪ್ರ ಬಾಂಧವರ ಮಿಲನ ಕೂಟವನ್ನು ಆಯೋಜಿಸಲಾಗಿತ್ತು.
ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಡಾ. ನಾರಾಯಣಸ್ವಾಮಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿ, ಡಿಸೆಂಬರ್ 11,12ರಂದು ಅಖಿಲ ಕರ್ನಾಟಕ ರಾಜ್ಯ ಮಟ್ಟದ 9ನೇ ಬ್ರಾಹ್ಮಣ ಮಹಾ ಸಮ್ಮೇಳನ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಸಂಘಟನೆ, ಸ್ವಾವಲಂಬನೆ ಮತ್ತು ಸಂಸ್ಕಾರ ಈ ಮೂರು ಸೂತ್ರಗಳನ್ನು ಆಧರಿಸಿ ಎರಡು ದಿನಗಳ ಸಮಾವೇಶ ಆಯೋಜನೆಗೊಂಡಿದೆ. ನಾಡಿನ ಪ್ರಮುಖ ಮಠಾಧಿಪತಿಗಳು, ಶ್ರೇಷ್ಠ ವಿದ್ವಾಂಸರು, ಭಾಗವಹಿಸಲಿದ್ದಾರೆ. ಇದರೊಂದಿಗೆ ವಿವಿಧ ವಿಚಾರಗೋಷ್ಠಿ ನಡೆಯಲಿದೆ ಎಂದರು.
ಈ ಸಂದರ್ಭ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಆರ್. ಸೋಮೇಶ್, ಪದಾಧಿಕಾರಿಗಳಾದ ಮಧುಸೂದನ್, ಶ್ರೀಕಾಂತ್, ಶ್ರೀನಿವಾಸ್, ಶ್ಯಾಂಸುಂದರ್, ಮಧು, ರವಿಶಂಕರ್, ರಾಂಪ್ರಸಾದ್, ವಿಜೇತ್, ಹಿರಿಯ ಸದಸ್ಯರಾದ ಹೆಚ್.ಆರ್. ದಾಮೋದರ್, ಜಿ. ಸೋಮೇಶ್, ಆರ್. ನಂದಕುಮಾರ್, ನಾಗರಾಜ್, ದೇವಿಬಳದ ಅಧ್ಯಕ್ಷೆ ಗಾಯತ್ರಿ ನಾಗರಾಜ್, ವಿಮಲ ರಾಜ ಗೋಪಾಲ್, ವಸಂತ ರಮೇಶ್, ಅರ್ಚನ ಶ್ರೀಕಾಂತ್, ಆಶಾ ಸತೀಶ್, ವಿದ್ಯಾ ಸೋಮೇಶ್ ಮುಂತಾದವರಿದ್ದರು.