*ಗೋಣಿಕೊಪ್ಪಲು, ನ. 12: ಇತ್ತೀಚೆಗೆ ಹೈದರಾಬಾದ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಹಾಕಿ ಪಂದ್ಯದಲ್ಲಿ ಕಾಪ್ಸ್ ಶಾಲೆಯ ಹಾಕಿ ಪಟುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಸಾಧನೆ ತೋರಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆಂದು ಶಾಲೆಯ ಪ್ರಾಂಶುಪಾಲೆ ಎನ್.ಎ. ಬೊಳ್ಳಮ್ಮ ಅವರು ತಿಳಿಸಿದ್ದಾರೆ.ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಕಾಪ್ಸ್ ಶಾಲೆಯ ವಿದ್ಯಾರ್ಥಿಗಳಾದ ಕೆ.ಎನ್. ನಮೃತ್, ಎ.ಕೆ. ಚಿಣ್ಣಪ್ಪ, ತರುಣ್ ತಿಮ್ಮಯ್ಯ, ಹೆಚ್. ಜಾಗೃತ್ ಮತ್ತು ಪ್ರದ್ವಿನ್ ಗೌಡ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಪಂದ್ಯದಲ್ಲಿ ಕಾಪ್ಸ್ ಶಾಲೆಯ ಹಾಕಿ ಪಟು ತರುಣ್ ತಿಮ್ಮಯ್ಯ ಒಟ್ಟು 3 ಗೋಲುಗಳನ್ನು ಬಾರಿಸಿ ಗೆಲುವು ತಂದುಕೊಟ್ಟರು ಎಂದು ತರಬೇತುದಾರ ಎ.ಜೆ. ಚಿಣ್ಣಪ್ಪ ತಿಳಿಸಿದ್ದಾರೆ.