ಮಡಿಕೇರಿ, ಆ. 28: ಶಾಲಾ ಮಕ್ಕಳ ಕುಂಚದ ಕಲೆಯನ್ನು ಅರಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಇಂದು ಮಡಿಕೇರಿಯ ಬಾಲಭವನ ದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಜರುಗಿತು. ಸುಮಾರು 175 ಮಕ್ಕಳು ತಮ್ಮ ಕುಂಚದ ಕಲೆಯನ್ನು ಅರಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ದನ್ನು ಎದುರು ನೋಡುತ್ತಿದ್ದಾರೆ. ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್ ವೀಲ್ ಕ್ಲಬ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಮತ್ತು ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ವರ್ಣಚಿತ್ರ ಸ್ಪರ್ಧೆ ನಡೆಯಿತು.

5 ರಿಂದ 8 ವರ್ಷದ ಮಕ್ಕಳ ಗುಂಪಿಗೆ ಹುಟ್ಟು ಹಬ್ಬದ ಸಂಭ್ರಮ, ನನ್ನ ಕನಸುಗಳು, ಉದ್ಯಾನವನ, ಗೆಳೆಯರೊಂದಿಗೆ ಮಳೆಯಲ್ಲಿ ಆಟದ ಚಿತ್ರ, 9 ರಿಂದ 12 ವರ್ಷದ ಮಕ್ಕಳಿಗೆ ಕುಟುಂಬದೊಂದಿಗೆ ವನಭೋಜನ, ರೈಲಿನಲ್ಲಿ ಪ್ರಯಾಣ, ಪ್ರಕೃತಿ ಸೌಂದರ್ಯ, ನೀರಿನ ಸಂರಕ್ಷಣೆ, ಗಣರಾಜ್ಯೋತ್ಸವ, 13 ರಿಂದ 16 ವರ್ಷದ ಮಕ್ಕಳಿಗೆ ಆಟದ ಮೈದಾನದಲ್ಲಿನ ಮೋಜು, ಗೆಳೆಯ ರೊಂದಿಗೆ ಸೈಕಲ್ ಪ್ರಯಾ, ವನ್ಯಜೀವಿ ಸಂರಕ್ಷಣೆ, ಸ್ವಾತಂತ್ರ್ಯ ದಿನಾಚರಣೆಯ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

ಶಾರೀರಿಕ ಹಾಗೂ ವಿವಿಧ ಅಸಾಮಥ್ರ್ಯತೆ ಉಳ್ಳವರಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ 5 ರಿಂದ 10 ವರ್ಷದ ಶಾರೀರಿಕ ಹಾಗೂ ವಿವಿಧ ಅಸಾಮಥ್ರ್ಯತೆಯುಳ್ಳ ಮಕ್ಕಳಿಗೆ ನನ್ನ ಮನೆ, ಹೂಗಳು ಮತ್ತು ಮರಗಳು, ಪಕ್ಷಿಗಳು, ಸೂರ್ಯೋದಯ, ಮಾನಸಿಕ ಅಸಾಮಥ್ರ್ಯರಿಗೆ ನನ್ನ ಮುದ್ದು ಪ್ರಾಣಿ, ನನ್ನ ತರಗತಿಯ ಕೊಠಡಿ, ನನ್ನ ಅಮ್ಮ, ಮನಬಂದ ಚಿತ್ರ, ದೃಷ್ಟಿ ಅಪರಿಪೂರ್ಣತೆಯುಳ್ಳ ಮಕ್ಕಳಿಗೆ ನನ್ನ ಶಾಲೆ, ಮಳೆಗಾಲ, ನನ್ನ ಹೂತೋಟದ ಹೂಗಳು, ನನ್ನ ಮೆಚ್ಚಿನ ಹಬ್ಬ, ಶ್ರವಣ ಹಾಗೂ ವಾಕ್ ಅಸಾಮಥ್ರ್ಯತೆಯುಳ್ಳ ಮಕ್ಕಳಿಗೆ ನನ್ನ ನೆರೆಹೊರೆ, ಆಟದ ಮೈದಾನದಲ್ಲಿನ ಮೋಜು, ಗಾಳಿಪಟ ಹಾರಾಟ, ಕುಟುಂಬದವರೊಂದಿಗೆ ದೂರ ದರ್ಶನ ವೀಕ್ಷಣೆ, 11 ರಿಂದ 18 ವರ್ಷದ ಶಾರೀರಿಕ ಹಾಗೂ ವಿವಿಧ ಅಸಾಮಥ್ರ್ಯತೆಯ ಮಕ್ಕಳಿಗೆ ಹೂತೋಟ, ನನ್ನ ಮೆಚ್ಚಿನ ವ್ಯಂಗ್ಯ ಚಿತ್ರ, ನನ್ನ ಶಿಕ್ಷಕ ಅಥವಾ ಶಿಕ್ಷಕಿ, ನನ್ನ ಮೆಚ್ಚಿನ ಋತು, ಮಾನಸಿಕ ಅಸಾಮಥ್ರ್ಯ ಮಕ್ಕಳಿಗೆ ನನ್ನ ಶಾಲೆಯಲ್ಲಿ ವಾರ್ಷಿಕೋತ್ಸವ, ದೋಣಿ ವಿಹಾರ, ಮಾರುಕಟ್ಟೆಗೆ ಭೇಟಿ, ಮನಬಂದ ಚಿತ್ರ, ದೃಷ್ಟಿ ಅಪರಿಪೂರ್ಣತೆಯುಳ್ಳ ಮಕ್ಕಳಿಗೆ ವನಭೋಜನ, ಬಸ್ ನಿಲ್ದಾಣ, ನನ್ನ ಗೆಳೆಯ ಅಥವಾ ಗೆಳತಿ, ಪರಿಸರ ಸಂರಕ್ಷಣೆ, ಶ್ರವಣ ಹಾಗೂ ವಾಕ್ ಅಸಾಮಥ್ರ್ಯತೆಯುಳ್ಳ ಮಕ್ಕಳಿಗೆ ವಿಜ್ಞಾನ ಪ್ರದರ್ಶನ, ಸಂಚಾರ ಸ್ಥಗಿತ, ಉಳುವ ರೈತ, ಪ್ರಕೃತಿ ವಿಕೋಪಗಳ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸಾಮಾನ್ಯ ವಿಭಾಗದಲ್ಲಿ 3 ಗುಂಪುಗಳಲ್ಲಿ ಹಾಗೂ ವಿಶೇಷ ವಿಭಾಗದಲ್ಲಿ 8 ಗುಂಪುಗಳಲ್ಲಿ ಸ್ಪರ್ಧೆ ನಡೆಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಿಗಳ ವಿವರಗಳನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವದು ಎಂದು ಸಂಘಟಕರು ತಿಳಿಸಿದ್ದಾರೆ.

ವರ್ಣಚಿತ್ರ ಸ್ಪರ್ಧೆಯನ್ನು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಯರಾಜ್ ಉಪಸ್ಥಿತರಿದ್ದು, ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಅಧ್ಯಕ್ಷ ಕೆ.ಎ. ಮೋಹನ್ ಮೊಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಮಕ್ಕಳ ಗೃಹದ ಮಕ್ಕಳು ಪ್ರಾರ್ಥಿಸಿ, ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮಿ ರಾಮಚಂದ್ರ ಸ್ವಾಗತಿಸಿ, ಲಯನೆಸ್ ಅಧ್ಯಕ್ಷೆ ಕವಿತ ಬೊಳ್ಳಪ್ಪ ವಹಿಸಿದ್ದರು.