ವೀರಾಜಪೇಟೆ, ಜ. 19: ಮೈಸೂರಿನ ಅಡಕನಹಳ್ಳಿಯಲ್ಲಿ ಇತ್ತೀಚೆಗೆ ನಡೆದ 17ನೇ ರಾಷ್ಟ್ರೀಯ ಜಾಂಬೂರಿಯಲ್ಲಿ ನಮ್ಮ ದೇಶದಿಂದ ಹಾಗೂ ಇತರೇ 7 ರಾಷ್ಟ್ರಗಳಿಂದ ಸುಮಾರು 27,000 ವಿದ್ಯಾರ್ಥಿಗಳು ಸ್ಕೌಟ್ಸ್ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ವೀರಾಜಪೇಟೆಯ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಇ. ಬ್ರಿಜೇಶ್, ಎಂ.ಡಿ. ಗಗನ್ ಗಣಪತಿ, ಸಿ.ಎ. ಮೊಹಮ್ಮದ್ ಆರೀಫ್ ಮತ್ತು 9ನೇ ತರಗತಿಯ ಎಂ.ಡಿ. ಬಿಪಿನ್ ಭೀಮಯ್ಯ, ಕೆ.ಆರ್. ಹವ್ಯಾಸ್, ಸಿ.ಜಿ. ಮೊಹಮ್ಮದ್ ಮಾಶೂಕ್ ಹಾಗೂ ಸ್ಕೌಟ್ಸ್ ಮಾಸ್ಟರ್ ಭಾಗವಹಿಸಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಸಹಾಸಮಯ ಚಟುವಟಿಕೆಗಳಾದ WಂಉಉಉS, ಒesseಟಿgeಡಿ oಜಿ Peಚಿಛಿe ಇವುಗಳಲ್ಲಿ ಭಾಗವಹಿಸಿ ಬ್ಯಾಡ್ಜ್ನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ ಪುರಸ್ಕರಿಸಿ, ಗೌರವಿಸಿದೆ.