ಮಡಿಕೇರಿ, ಡಿ. 15: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ತಾ. 16 ರಿಂದ ತಾ. 18 ರವರೆಗೆ ನಡೆಯಬೇಕಾಗಿದ್ದ ರಾಜ್ಯಮಟ್ಟದ ಯುವ ಜನೋತ್ಸವ ವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಮಂಡುವಂಡ ಜೋಯಪ್ಪ ಹಾಗೂ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಂದೂಡಲ್ಪಟ್ಟ ಯುವ ಜನೋತ್ಸವ ಡಿ.23 ರಿಂದ 25 ರ ವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಜಿಲ್ಲಾಮಟ್ಟದ ಗುಂಪು ಸ್ಪರ್ಧೆಯಲ್ಲಿ ಪ್ರಥಮ, ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸ್ಪರ್ಧಾಳುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಗಳನ್ನು ನೀಡಲಾಗುತ್ತದೆ ಎಂದು ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ನೀಡಿದ್ದು, ಶಾಸ್ತ್ರೀಯ ನೃತ್ಯ ಕೂಚಿಪುಡಿ ಗೋಣಿಕೊಪ್ಪದ ಕಾರ್ತಿಕ್ ಶೆಣೈ ಪ್ರಥಮ, ಭರತ ನಾಟ್ಯ ಗೋಣಿಕೊಪ್ಪದ ಹರ್ಷಕೀರ್ತಿ ದಶರಥ ಪ್ರಥಮ, ಆಶುಭಾಷಣ ಮದೆ ಮಹೇಶ್ವರ ವಿದ್ಯಾಲಯದ ರಮೀಜಾ ಪ್ರಥಮ, ಮಡಿಕೇರಿ ನೆಲ್ಲಕ್ಕಿ ಯುವತಿ ಮಂಡಳಿಯ ಕೆ.ಆರ್.ಜೀವಿತ ದ್ವಿತೀಯ, ದೇವಿಕಾ ತೃತೀಯ, ಶಾಸ್ತ್ರೀಯ ಗಾಯನ ಅರವತ್ತೊಕ್ಲುವಿನ ಅನನ್ಯ ಪ್ರಥಮ, ಮಡಿಕೇರಿಯ ಪ್ರಜ್ವಲ್ ದ್ವಿತೀಯ, ತಾಳತ್ತಮನೆಯ ನೇತಾಜಿ ಯುವತಿ ಮಂಡಳಿಯ ಶ್ರೇಯಶ್ರೀ ತೃತೀಯ, ಶಾಸ್ತ್ರೀಯ ವಾದನ-ತಬಲ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘದ ಎಸ್.ಬಿ. ಗಿರೀಶ್ ಪ್ರಥಮ, ಗೋಣಿಕೊಪ್ಪದ ಶರತ್ ಕುಮಾರ್ ದ್ವಿತೀಯ, ಹಾರ್ಮೋನಿಯಂ ಗೋಣಿಕೊಪ್ಪದ ಶರತ್ ಕುಮಾರ್ ಪ್ರಥಮ, ಪೊನ್ನಂಪೇಟೆಯ ಎಸ್.ಟಿ. ಗಿರೀಶ್ ದ್ವಿತೀಯ, ಗಿಟಾರ್ ಪೊನ್ನಂಪೇಟೆಯ ದೀಕ್ಷಿತ್ ನೆಲ್ಲಿತ್ತಾಯ ಪ್ರಥಮ, ಕೆ.ಬಿ. ಭೂಮಿಕಾ ದ್ವಿತೀಯ, ಪ್ರೇರಿಕ್ ಡಿಸೋಜ ತೃತೀಯ, ಜನಪದ ಗೀತೆ ಪೊನ್ನಂಪೇಟೆಯ ಜೈಬೀಮ್ ಕಲಾ ಯುವಕ ಸಂಘ ಪ್ರಥಮ, ನೆಲ್ಲಕ್ಕಿ ಯುವತಿ ಮಂಡಳಿ ದ್ವಿತೀಯ, ಅಸ್ಮಾ ಮತ್ತು ತಂಡ ತೃತೀಯ, ಜನಪದ ನೃತ್ಯ ನೆಲ್ಲಕ್ಕಿ ಯುವತಿ ಮಂಡಳಿ ಪ್ರಥಮ, ಗೋಣಿಕೊಪ್ಪದ ಕಾವೇರಿ ಕಾಲೇಜು ದ್ವಿತೀಯ, ಪೊನ್ನಂಪೇಟೆಯ ಜೈಭೀಮ್ ಯುವಕ ಸಂಘ ತೃತೀಯ ಹಾಗೂ ಏಕಾಂತ ನಾಟಕ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಪ್ರಥಮ ಬಹುಮಾನಗಳಿಸಿದೆ.