ಮಡಿಕೇರಿ, ಡಿ. 4: ನಗರದ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾ. 5 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಡಿಕೇರಿ ತಾಲೂಕಿನ 9 ರಿಂದ 16 ವರ್ಷದ ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ. ಸೃಜನಾತ್ಮಕ ಕಲೆ (ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ ಮೂರರಲ್ಲೂ ಕಡ್ಡಾಯ), ಸೃಜನಾತ್ಮಕ ಬರವಣಿಗೆ (ಕಥೆ, ಕವನ, ಪ್ರಬಂಧ ಬರೆಯುವದು ಮೂರರಲ್ಲೂ ಕಡ್ಡಾಯ) ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ, ನೃತ್ಯ, ಮ್ಯಾಜಿಕ್ ಇತ್ಯಾದಿ ಯಾವದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ. ವಿಜ್ಞಾನದಲ್ಲಿ ನೂತನ ಆವಿಷ್ಕಾರದಲ್ಲಿ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ಪ್ರಶ್ನೆಗಳಿಗೆ ಉತ್ತರ. ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳು ಅವಶ್ಯಕ ಸಾಮಗ್ರಿಗಳನ್ನು ತರುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ದೂರವಾಣಿ ಸಂಖ್ಯೆ: 08272-220087 ಅನ್ನು ಸಂಪರ್ಕಿಸಬಹುದು.