(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಜೂ. 19: ಕರ್ನಾಟಕ ರಾಜ್ಯಾದ್ಯಂತ ಏಕರೂಪದ ಸಾರಿಗೆ ಸೇವೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ. ಸಾರಿಗೆ ಸೇವೆಯನ್ನು ರಾಷ್ಟ್ರೀಕರಣ ಗೊಳಿಸು ವದರೊಂದಿಗೆ ರಾಜ್ಯ ಸಾರಿಗೆ ಉದ್ದಿಮೆಯ ಮೂಲಕ ಮಾತ್ರ ಸಾರಿಗೆ ಸಂಪರ್ಕ ಕಲ್ಪಿಸುವದು ಈ ಉದ್ದೇಶ ವಾಗಿದೆ. ಈ ಕುರಿತು ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಮೂಲಕ ಜೂನ್ 10 ರಂದು ಅಧಿಸೂಚನೆ ಹೊರಡಿಸಲಾಗಿದೆ.

ರಾಜ್ಯದಲ್ಲಿ ಸಾರಿಗೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಹಾಲಿ 21 ಅನುಮೋದಿತ ಯೋಜನೆಗಳಿದ್ದು, ಈ 21 ಯೋಜನೆಯ ಬದಲಿಗೆ ಏಕೈಕ ಸಮಗ್ರ ಪ್ರದೇಶ ಯೋಜನೆಯನ್ನು ರೂಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಕರ್ನಾಟಕ ಸರಕಾರವು ಪ್ರಸಕ್ತ ಪರಿಸ್ಥಿತಿ ಮತ್ತು ಸಂದರ್ಭಗಳನ್ನು ಪರಿಶೀಲಿಸಿ ದಕ್ಷ, ಸಮರ್ಪಕ ಮಿತವ್ಯಯಕಾರಿ ಮತ್ತು ಸೂಕ್ತ ಸಮನ್ವಯತೆಯನ್ನುಳ್ಳ ಪ್ರಯಾಣಿಕರ ಸಾರಿಗೆ ಸೇವೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ರಸ್ತೆ ಸಾರಿಗೆ ಸೇವೆಗಳನ್ನು ರಾಜ್ಯ ಸಾರಿಗೆ ಉದ್ಯಮಗಳು ನಡೆಸತಕ್ಕದ್ದು. ಮತ್ತು ಎಲ್ಲಾ ಅನುಮೋದಿತ, ಮಾರ್ಪಡಿತ ಯೋಜನೆಗಳ ಸ್ಥಾನದಲ್ಲಿ ಇಡೀ ಕರ್ನಾಟಕ ರಾಜ್ಯವನ್ನು ಒಳಗೊಂಡಿ ರುವ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊಸ ಪ್ರದೇಶ ಯೋಜನೆಯನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯಕ್ಕೆ ಸಂಬಂಧಿಸಿದಂತೆ ಸಮಗ್ರ ಪ್ರದೇಶ ಯೋಜನೆಯನ್ನು (ಅomಠಿಡಿeheಟಿsive ಂಡಿeಚಿ ಓoಣiಜಿiಛಿಚಿಣioಟಿ) ರೂಪಿಸುವದು ಮುಕ್ತವೆಂದು ಪರಿಗಣಿಸಿರುವದರಿಂದ ಉದ್ದೇಶಿತ ಪ್ರದೇಶ ಯೋಜನೆಯನ್ನು ಮೋಟಾರು ವಾಹನಗಳ ಅಧಿನಿಯಮ 1988ರ 99 ಮತ್ತು 100ನೇ ಕಲಂ ಮೇರೆಗೆ ಅಗತ್ಯ ಪಡಿಸಲಾದಂತೆ ಈ ಅಧಿಸೂಚನೆ ಪ್ರಕಟಿಸಲಾಗಿದೆ.

ರಾಜ್ಯ ಸಾರಿಗೆ ಉದ್ಯಮಗಳಿಂದ ಹಾಗೂ ಉದ್ದೇಶಿತ ಪ್ರದೇಶ ಯೋಜನೆ ಯಿಂದ ಬಾಧಿತರಾಗ ಬಹುದಾದ ಸಾಧ್ಯತೆಯಿರುವ ವ್ಯಕ್ತಿಗಳು ಈ ಬಗ್ಗೆ ತಮ್ಮ ಆಕ್ಷೇಪ - ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ಕರ್ನಾಟಕ ಸರಕಾರ ಇಲ್ಲಿಗೆ ಕಳುಹಿಸಬಹುದಾಗಿದೆ.

ಆತಂಕದಲ್ಲಿ ಖಾಸಗಿ ಬಸ್ ಮಾಲೀಕರು

ಉದ್ದೇಶಿತ ಈ ಯೋಜನೆ ಯಿಂದ ಖಾಸಗಿ ಬಸ್ ಮಾಲೀಕರು ಹಾಗೂ ಸಿಬ್ಬಂದಿ ಮತ್ತು ಅವಲಂಬಿ ತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಯೋಜನೆಯನ್ನು ಜಾರಿಗೆ ತಂದರೆ ಪ್ರಸ್ತುತ ಉದ್ದಿಮೆಯಲ್ಲಿ ತೊಡಗಿಸಿ ಕೊಂಡಿರು ವವರಿಗೆ ಹಾಲಿ ಇರುವ ಪರವಾನಗಿಯನ್ನು ಊರ್ಜಿತಗೊಳಿಸ ಲಿದೆಯೇ ಅಥವಾ ತೆಗೆದು ಹಾಕಲಿದೆಯೇ ಎಂಬದು ಗೊಂದಲಕ್ಕೆ ಈಡು ಮಾಡಿದೆ.

ತಾ. 22 ರಂದು ಸಭೆ

ಏರಿಯಾ ಸ್ಕೀಂ ಕುರಿತಾಗಿ ಚರ್ಚಿಸಲು ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ತಾ. 22 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಹೊಟೇಲ್ ಈಸ್ಟ್‍ಎಂಡ್‍ನಲ್ಲಿ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದ ಸಭೆ ಕರೆಯಲಾಗಿದೆ. ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಅಲ್ಲಿ ಮುಂದಿನ ಹೆಜ್ಜೆಯ ಕುರಿತು ತೀರ್ಮಾನ ಕೈಗೊಳ್ಳಲಾಗುವದು.

ಪ್ರಸ್ತುತ ಜಿಲ್ಲೆಯಲ್ಲಿ 85 ಖಾಸಗಿ ಬಸ್ ಮಾಲೀಕರಿದ್ದು, ಒಟ್ಟು 160 ಬಸ್‍ಗಳು ಸಂಚರಿಸುತ್ತಿದೆ. ಸುಮಾರು 1200ಕ್ಕೂ ಅಧಿಕ ಮಂದಿ ಖಾಸಗಿ ಸಾರಿಗೆ ಸೇವೆಯ ಮೂಲಕ ಬದುಕು ಕಂಡುಕೊಂಡಿದ್ದಾರೆ.