ಮಡಿಕೇರಿ, ಸೆ. 4: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಜೆ.ಪಿ. ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಕರವಂಡ ಲವ ನಾಣಯ್ಯ ಅವರು ಇತ್ತೀಚೆಗೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ದೊಡ್ಡಪುಲಿಕೋಟು ಶ್ರೀ ಕೋಟೆ ಭಗವತಿ ಸಂಘ ಮನವಿ ಮಾಡಿದೆ.

ಬಲ್ಲಮಾವಟಿ ಗ್ರಾ.ಪಂ.ನಲ್ಲಿ ಬಿ.ಜೆ.ಪಿ.ಯನ್ನು ಆಡಳಿತಕ್ಕೆ ತರುವಲ್ಲಿ ಲವ ನಾಣಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದ ಹಿರಿಯರು ಸ್ಥಳೀಯವಾಗಿ ಲವ ನಾಣಯ್ಯ ಅವರ ಅಭಿಪ್ರಾಯವನ್ನು ಕೇಳದೆ ಕೆಲವೊಂದು ತೀರ್ಮಾನವನ್ನು ಕೈಗೊಳ್ಳುವದು ಸರಿಯಲ್ಲ. ಪಕ್ಷದಲ್ಲಿ ಅವರಿಗೆ ಉನ್ನತ ಸ್ಥಾನಮಾನ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗುವದು ಎಂದು ಸಂಘದ ಸದಸ್ಯರಾದ ಕರವಂಡ ಅಪ್ಪಣ್ಣ, ಮುಕ್ಕಾಟಿರ ಬಿನ್ನು, ಪೆಬ್ಬಟ್ಟಿರ ಯತೀಶ್, ಪಿ.ಕೆ. ರೋಹಿತ್ ಹಾಗೂ ಕರವಂಡ ಪೊನ್ನಪ್ಪ ತಿಳಿಸಿದ್ದಾರೆ.