ಮಡಿಕೇರಿ, ನ. 16: ಬೆಂಗಳೂರಿನ ಮೇಕ್ರಿ ವೃತ್ತದಲ್ಲಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೊಡಗಿನ ಯುವಕನೋರ್ವ ದುರ್ಮರಣಗೊಂಡಿರುವ ಘಟಣೆ ನಡೆದಿದೆ. ಬಾಳೆಯಡ ಸೋಮಣ್ಣ (ಶೋಭಿ -26) ಮೃತ ಯುವಕ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸೋಮಣ್ಣ ಬೈಕ್‍ನಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿಯಾಗಿರುವದಾಗಿ ತಿಳಿದುಬಂದಿದೆ.

ಇವರು ಮೂಲತಃ ನೆಲಜಿ ಗ್ರಾಮದ ನಿವಾಸಿ ಪಾಲಿಬೆಟ್ಟದಲ್ಲಿ ಟಾಟಾ ಕಾಫಿಯಲ್ಲಿ ಉದ್ಯೋಗದಲ್ಲಿರುವ ಬಾಳೆಯಡ ಸದಾ ಕುಶಾಲಪ್ಪ ಅವರ ಪುತ್ರ. ತಾಯಿ ಬೀನಾಕುಮಾರಿ ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇವರಿಗೆ ಸೋಮಣ್ಣ ಏಕೈಕ ಪುತ್ರ. ಈ ಘಟನೆಯಿಂದ ಕುಟುಂಬ ವರ್ಗ ಶೋಕ ಸಾಗರದಲ್ಲಿ ಮುಳುಗಿದೆ. ಅಂತ್ಯಕ್ರಿಯೆ ನೆಲಜಿಯಲ್ಲಿ ನೆರವೇರಿತು .