ಕುಶಾಲನಗರ/ನಾಪೆÇೀಕ್ಲು, ಡಿ. 14: ಮೈಸೂರು ರಸ್ತೆಯ ಬಿಳಿಕೆರೆಯಲ್ಲಿ ಸ್ವಿಫ್ಟ್ ಡಿಸೈಯರ್ ಮತ್ತು ಪಿಕ್‍ಅಪ್ ವಾಹನ ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ಪಾಲೂರು ಗ್ರಾಮದ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಅಪರಾಹ್ನ 2.10ಕ್ಕೆ ನಡೆದಿದೆ.
ಪಾಲೂರು ಗ್ರಾಮದ ಮಂದನೆರವಂಡ ಡೈಸಿ ಕಾರ್ಯಪ್ಪ (45) ಮತ್ತು ಬೇಬಿ ತಿಮ್ಮಯ್ಯ (54) ಮೃತಪಟ್ಟ ದುರ್ದೈವಿಗಳು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಅದೇ ಗ್ರಾಮದ ಪೆÇದುವಡ ಆಶ, ವೀಣಾ ಮತ್ತು ಸರಸ್ವತಿ ಅವರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಿವರ: ಈ ಐವರು ಮಹಿಳೆಯರು ಡೈಸಿ ಕಾರ್ಯಪ್ಪ ಅವರ ಸ್ವಿಫ್ಟ್ ಡಿಸೈಯರ್ (ಕೆಎ 12- ಪಿ. 5751) ಕಾರಿನಲ್ಲಿ ಮೈಸೂರಿನಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಒಟ್ಟಿಗೆ ತೆರಳಿದ್ದರು. ಡೈಸಿ ಕಾರ್ಯಪ್ಪ ತನ್ನ ಕಾರನ್ನು ತಾವೇ ಚಾಲನೆ ಮಾಡುತ್ತಿದ್ದರು. ಸಮಾರಂಭ ಮುಗಿಸಿ ಹಿಂತಿರುಗುವ ವೇಳೆ ಅಪರಾಹ್ನ 2.10 ಗಂಟೆಗೆ ಎದುರಿನಿಂದ ಬರುತ್ತಿದ್ದ ಪಿಕ್‍ಅಪ್ ವಾಹನಕ್ಕೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರು ಚಾಲಿಸುತ್ತಿದ್ದ
(ಮೊದಲ ಪುಟದಿಂದ) ಡೈಸಿ ಕಾರ್ಯಪ್ಪ ಮತ್ತು ಅವರ ಹಿಂಬದಿ ಸೀಟಿನ ಬಾಗಿಲ ಬದಿಯಲ್ಲಿ ಕುಳಿತಿದ್ದ ಬೇಬಿ ತಿಮ್ಮಯ್ಯ ಇವರುಗಳು ಸ್ಥಳದಲ್ಲಿಯೇ ಮೃತಪಟ್ಟರೆ, ಸಣ್ಣ ಪುಟ್ಟ ಗಾಯಗಳಾಗಿದ್ದ ಇತರ ಮೂವರನ್ನು ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ.