ಮಡಿಕೇರಿ, ಜ. 28: 68ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳು ಇಂದು ನವದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನಲ್ಲಿ ಪ್ರಧಾನಮಂತ್ರಿಗಳ ರ್ಯಾಲಿ ಎಂದು ಕರೆಯಲ್ಪಡುವ ಎನ್ಸಿಸಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಕರ್ನಾಟಕ - ಗೋವಾ ಡೈರೆಕ್ಟರೇಟ್ ಪಡಕೊಂಡ ಮೊದಲನೇ ರನ್ನರ್ ಅಪ್ ಪ್ರಶಸ್ತಿಯನ್ನು ತಂಡದ ಪರವಾಗಿ ಮಡಿಕೇರಿಯ ಐಶ್ವರ್ಯ ದೇಚಮ್ಮ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದರು.19ನೇ ಕರ್ನಾಟಕ ಬೆಟಾಲಿಯನ್ ಅನ್ನು ಪ್ರತಿನಿಧಿಸಿದ್ದ ನಗರದ ಕಾನ್ವೆಂಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಐಶ್ವರ್ಯ ತಾ. 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಎನ್ಸಿಸಿ ಘಟಕವನ್ನು ಮುನ್ನಡೆಸಿದ್ದಳು. ಮಡಿಕೇರಿಯ ಎಫ್ಎಂಕೆಎಂಸಿ ಕಾಲೇಜಿನ ಎನ್ಸಿಸಿ ಮುಖ್ಯಸ್ಥ ಮೇ| ರಾಘವನ್ ಅವರಿಂದ ತರಬೇತಿ ಪಡೆದಿರುವ ಈಕೆ ಅಜ್ಜಿನಂಡ ಗಣೇಶ್ ಹಾಗೂ ಮೋಂತಿ ಗಣೇಶ್ ಅವರ ಪುತ್ರಿ.