ಕುಶಾಲನಗರ, ಜ. 8: ಭಾವನಾತ್ಮಕ ನೆಲೆಗಟ್ಟಿನಲ್ಲಿ ಭಾಷೆ, ಸಂಸ್ಕøತಿ, ಸಾಹಿತ್ಯ ಹಾಗೂ ಸಂಗೀತ ವನ್ನು ಗೌರವಿಸುವದು ಅಗತ್ಯಗತ್ಯ ವಾಗಿದೆ ಎಂದು ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕೆ. ತಿಮ್ಮಯ್ಯ ಹೇಳಿದರು.ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ರತ್ನಾಕರವರ್ಣಿಯ ಭರತೇಶ ವೈಭವದ ಸ್ತ್ರೀ ಪಾತ್ರಗಳ ಅನನ್ಯತೆ ಕುರಿತಾದ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಆಧುನಿಕ ಜಗತ್ತಿನಲ್ಲಿ ವಾಣಿಜ್ಯ ವಿಷಯಗಳತ್ತ ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತ ರಾಗುತ್ತಿದ್ದಾರೆ. ಈ ಹಿನ್ನೆಲೆ ಕನ್ನಡ ಭಾಷಾ ವಿಷಯ ಕಳೆಗುಂದು ವಂತಾಗಿದೆ. ಪ್ರತೀ ವಿದ್ಯಾರ್ಥಿ ಕೂಡ ನಾಡಿನ ಭಾಷೆ, ಸಂಸ್ಕøತಿ, ಸಾಹಿತ್ಯವನ್ನು ಭಾವನಾತ್ಮಕ ನೆಲೆಗಟ್ಟಿನಲ್ಲಿ ಸ್ವೀಕರಿಸಬೇಕಿದೆ.
12ನೇ ಶತಮಾನದಲ್ಲಿ ಪ್ರಬಲವಾಗಿದ್ದ ಜೈನ ಸಮುದಾಯ ತದನಂತರ ಇತರೆ ಧರ್ಮಗಳ ಸವಾಲು ಹಾಗೂ ಹಾವಳಿಯಿಂದ ಕ್ರಮೇಣವಾಗಿ ತನ್ನ ಛಾಪನ್ನು ಕಳೆದುಕೊಳ್ಳಲು ಆರಂಭಿಸಿತು. ಕಠಿಣ ವೃತಗಳ ಪರಿಪಾಲಕರಾಗಿದ್ದ ಜೈನ ಧರ್ಮೀಯರು ಕ್ರಮೇಣ ವೈಷ್ಣವ ಹಾಗೂ ವೀರಶೈವ ಧರ್ಮದ ಸರಳ ಆಚಾರ ವಿಚಾರಗಳಿಗೆ ಮನಸೋತು ಮತಾಂತರಗೊಳ್ಳಲು ಆರಂಭಿಸಿದ ಕಾಲಘಟ್ಟದಲ್ಲಿ ಕವಿ ರತ್ನಾಕರವರ್ಣಿ ತನ್ನದೇ ಆದ ಸರಳ ಸೂತ್ರದ ಮೂಲಕ ಜೈನೀಯರಿಗೆ ಹೊಸ ದಿಕ್ಕನ್ನು ತೋರಿಸಿ ಮಾರ್ಗದರ್ಶನ ಮಾಡಿದಂತಹ ಕವಿಯಾಗಿದ್ದಾರೆ ಎಂದು ಬಣ್ಣಿಸಿದರು.
ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಪ್ರಾಸ್ತಾವಿಕ ನುಡಿಗಳಾಡಿ ರತ್ನಾಕರವರ್ಣಿಯ ಸಾಂಗತ್ಯ ಸಾಹಿತ್ಯ ಪ್ರಕಾರ ಹಾಗೂ ಆತ ರಚಿಸಿದ ಶತಕ ಸಾಹಿತ್ಯದ ಬಗ್ಗೆ ಮಾಹಿತಿ ಒದಗಿಸಿ ದರು. ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಕೆ. ಕೇಶವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸುಬ್ರಮಣ್ಯ, ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್ ಮತ್ತಿತರರು ಇದ್ದರು.