ಶನಿವಾರಸಂತೆ, ಜೂ. 20: ರಂಜಾನ್ ಹಬ್ಬದ ಆಚರಣೆಗೆ ಪೂರ್ವ ಭಾವಿಯಾಗಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಹೆಚ್.ಎಂ. ಗೋವಿಂದ್ ಅವರು ಮಾತನಾಡಿ ಎಲ್ಲಾ ಧರ್ಮದವರು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ಊಹಾ ಪೋಹ ವಿಚಾರಗಳಿಗೆ ಕಿವಿಗೊಡ ದಂತೆ ಮನವಿ ಮಾಡಿದರು.
ಸಭೆಯಲ್ಲಿ ಶನಿವಾರಸಂತೆ, ಕೊಡ್ಲಿಪೇಟೆ, ಗುಡುಗಳಲೆಯ ಮುಸ್ಲಿಂ ಬಾಂಧವರುಗಳಾದ ಅಕ್ರಮ್ ಪಾಶಾ, ಅಬ್ದುಲ್ ರೆಹಮಾನ್, ಶರೀಫ್, ಇಮ್ರ್ರಾನ್, ಗುಡುಗಳಲೆ ಮಸೀದಿಯ ಅಧ್ಯಕ್ಷ ಹಮೀದ್ ಯುನಸ್, ಮನು, ಕೆ.ಕೆ. ವಿಜಯ್, ವಿವಿಧ ಮಸೀದಿಗಳ ಮೌಲವಿ ಹಾಗೂ ಜಮಾಅತ್ ಮುಖಂಡರು ಹಾಜರಿದ್ದು ಮಾತನಾಡಿ, ನಗರದ ಮಸೀದಿಯ ಮುಂಭಾಗ ಜನಸಂದಣಿ ಹಾಗೂ ವಾಹನಗಳ ದಟ್ಟಣೆಯನ್ನು ಸರಿಪಡಿಸುವಂತೆ ತಿಳಿಸಿದರು.
ಶಾಲಾ ಮಕ್ಕಳು ಬರುವ ಸಮಯದಲ್ಲಿ ಪಟ್ಟಣದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಅತೀ ವೇಗದ ಓಡಾಟ ನಿಯಂತ್ರಿಸಲು ತಿಳಿಸಿದರು. ಪೊಲೀಸ್ ಸಿಬ್ಬಂದಿಗಳಾದ ಶಿವಪ್ಪ, ಎಂ.ಬಿ. ರವೀಂದ್ರ, ಎಂ.ವಿ. ಸಫೀರ್, ಸಂತೋಷ್ ಕುಮಾರ್, ಐ.ಜೆ. ಸುರೇಶ್, ಶಶಿ, ಸವಿತ ಉಪಸ್ಥಿತರಿದ್ದು, ಹೆಚ್.ಎನ್. ರಾಧ ಸ್ವಾಗತಿಸಿ, ಕೆ.ಪಿ. ರಮೇಶ್ ವಂದಿಸಿದರು.