ಸೋಮವಾರಪೇಟೆ, ಜೂ. 18: ರಂಜಾನ್ ಪ್ರಯುಕ್ತ ಎಸ್‍ವೈಎಸ್‍ನ ಕಾಗಡಿಕಟ್ಟೆ ಶಾಖೆ ವತಿಯಿಂದ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಜನಾಂಗದ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್‍ಗಳನ್ನು ವಿತರಿಸಲಾಯಿತು. ಸಮೀಪದ ಕಾಗಡಿಕಟ್ಟೆ ಮದರಸದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮದರಸ ವ್ಯಾಪ್ತಿಯ 5 ಬಡ ಕುಟುಂಬಗಳನ್ನು ಗುರುತಿಸಿ, ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್‍ಗಳನ್ನು ಎಸ್‍ವೈಎಸ್‍ನ ಕಾಗಡಿಕಟ್ಟೆ ಶಾಖೆಯ ಅಧ್ಯಕ್ಷ ಕೆ.ಎ. ಖಾಲಿದ್ ವಿತರಿಸಿದರು. ಈ ಸಂದರ್ಭ ಕಾರ್ಯದರ್ಶಿ ಇಬ್ರಾಹಿಂ ಸಾಗರ್, ಉಪಾಧ್ಯಕ್ಷ ಕೆ.ಇ. ಯೂಸುಫ್, ಕೋಶಾಧಿಕಾರಿ ಕೆ.ಎ. ಅಬ್ದುಲ್ ರೆಹಮಾನ್, ಎಸ್‍ವೈಎಸ್ ಸೆಂಟರ್‍ನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಸಖಾಫಿ, ಜಂಟಿ ಕಾರ್ಯದರ್ಶಿ ಕೆ.ಎಚ್. ಖಾದರ್ ಸೇರಿದಂತೆ ಇನ್ನಿತರ ಪ್ರಮುಖರುಗಳು ಹಾಜರಿದ್ದರು.