ಮಡಿಕೇರಿ, ಆ. 5: ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಮಡಿಕೇರಿಯಲ್ಲಿ ಯೋಜನಾ ನಿರ್ದೇಶಕರ ಒಂದು ಹುದ್ದೆಗೆ ಗೌರವ ಧನದ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಆಕಾಂಕ್ಷಿಗಳು ಕಾರ್ಮಿಕ ಅಧಿಕಾರಿ ಕಚೇರಿ, ಕೊಠಡಿ ಸಂಖ್ಯೆ 11, ಜಿಲ್ಲಾ ಆಡಳಿತ ಭವನ, ಮಡಿಕೇರಿ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆಯಬಹುದು.

ಅರ್ಜಿದಾರರು ತಾ. 17 ರಂದು ಸಂಜೆ 5 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಎಂ.ಎಸ್. ಡಬ್ಲ್ಯೂ/ಅಭಿವೃದ್ಧಿ ಅಧ್ಯಯನ, ನಿರ್ವಹಣಾ ಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು, ವಿವಿಧ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುರಿತು 5 ವರ್ಷಗಳ ಅನುಭವ ಹೊಂದಿರಬೇಕು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವದು, ಕನ್ನಡ ಮತ್ತು ಆಂಗ್ಲ ಮಾತನಾಡುವ ಹಾಗೂ ಬರೆಯುವಲ್ಲಿ ಕೌಶಲ್ಯ ಹೊಂದಿರಬೇಕು.

ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು, 40 ವಯೋಮಿತಿ ಯನ್ನು ಮೀರಿರಬಾರದು (ಈ ನಿಯಮ ಹೊಸ ನೇಮಕಾತಿ ಮಾಡುವದಕ್ಕೆ ಅನ್ವಯಿಸುತ್ತದೆ, ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ 40 ವರ್ಷ ಮೀರಿದ್ದರೆ ಅಂತಹ ಅಭ್ಯರ್ಥಿ ಪುನರ್ ನೇಮಕಾತಿಯ ನಂತರ ಸರ್ಕಾರದ ನಿವೃತ್ತಿ ವಯಸ್ಸನ್ನು ತಲಪುವವರೆಗೂ ಕಾರ್ಯನಿರ್ವಹಿಸಬಹುದು) ಕಚೇರಿಯ ಲೆಕ್ಕ ಪತ್ರಗಳ ವ್ಯವಹಾರ ವನ್ನು ಅರಿತಿರಬೇಕು.

ಯಾವದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಾಗಿರಬಾರದು) ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.