ಕಾರ್ಯವನ್ನು ಕೃಷಿ ಇಲಾಖೆ ಸಹಯೋಗದೊಂದಿಗೆ ನರಿಯಂದಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೂಲಿ ಕಾರ್ಮಿಕರ ಕೊರತೆ, ಏರುತ್ತಿರುವ ಉತ್ಪಾದನಾ ವೆಚ್ಚ ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದ ಭತ್ತದ ಬೇಸಾಯಕ್ಕೆ ಹಿನ್ನಡೆಯಾಗಿದ್ದು ಇದೀಗ ರೈತರು ಯಾಂತ್ರೀಕತೆಗೆ ಮಾರು ಹೋಗುತ್ತಿದ್ದಾರೆ. ಯಂತ್ರಗಳ ಬಳಕೆಯಿಂದ ಕೆಲಸ ಕಾರ್ಯ ಹಗುರವಾಗಿರುವದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಚೇರಂಬಾಣೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಯಂತ್ರಧಾರೆ ಯೋಜನೆಯ ಮೂಲಕ ರೈತರಿಗೆ ಕೃಷಿ ಉಪಕರಣಗಳನ್ನು ನೀಡಲಾಗುತಿದ್ದು, ಬಾಡಿಗೆ ರೂಪದಲ್ಲಿ ಭತ್ತದ ಗದ್ದೆಯಲ್ಲಿ ನಾಟಿ ಯಂತ್ರದ ಬಳಕೆಯನ್ನು ಮಾಡಲಾಗುತ್ತಿದೆ. ಚೆಯ್ಯಂಡಾಣೆ ಗ್ರಾಮದ ಶ್ಯಾನುಭೋಗರ ಎನ್.ಶೈಲಜ, ಬೊವ್ವೇರಿಯಂಡ ರಘು ಅಚ್ಚಯ್ಯನವರ ಮಗ ಕಾವೇರಪ್ಪ, ಮಕ್ಕಿಮನೆ ಎಸ್.ಸುಧೀರ, ತೋಟಂಬೈಲು ಕರುಂಬಯ್ಯ, ಕುಕ್ಕೆಮನೆ ಸುಬ್ರಹ್ಮಣ್ಯ ಇವರ ಗದ್ದೆಯಲ್ಲಿ ಯಂತ್ರದ ಮೂಲಕ ನಾಟಿ ಕೆಲಸ ಬಿರುಸಿನಿಂದ ಸಾಗುತ್ತಿದೆ.
ಈಗಾಗಲೇ ಸಸಿ ಮಡಿ ಮಾಡಲಾಗಿದ್ದು ನಿಗದಿತ ಅವಧಿಯಲ್ಲಿ ಯಂತ್ರದ ಮೂಲಕ ನಾಟಿ ಮಾಡಲಾಗುತ್ತಿದೆ.
ನಾಟಿ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಕಿರಣ್ ಕಾರ್ಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಗ್ರಾಮ ಪಂಚಾಯಿತಿ ಸದಸ್ಯ ರತೀಶ್ ಕುಮಾರ್, ಕೋಡೀರ ತಮ್ಮಯ್ಯ, ಕಣಿಯರ ಪ್ರಕಾಶ್, ಮುಕ್ಕಾಟಿರ ಹರೀಶ್, ಗ್ರಾಮದ ಪ್ರಮುಖರಾದ ಬೊವ್ವೇರಿಯಂಡ ಲವಕುಮಾರ್, ಮಕ್ಕಿಮನೆ ಶಿವರಾಂ, ಬಿಳಿಯಂಡ್ರ ಕೃಷ್ಣಪ್ಪ, ಚಂಡೀರ ಕಾರ್ಯಪ್ಪ, ಬಿಳಿಯಂಡ್ರ ಲಕ್ಷ್ಮಣ, ಕೃಷಿ ಅಧಿಕಾರಿ ಜಯರಾಂ, ಕೃಷಿ ಇಲಾಖೆಯ ಆತ್ಮ ಯೋಜನೆಯ ವಸಂತಕುಮಾರ್, ಸಿಬ್ಬಂದಿ ಗಾಯತ್ರಿ, ಸಾಗರಿ, ಇನ್ನಿತರರು ಉಪಸ್ಥಿತರಿದ್ದರು.
- ದುಗ್ಗಳ ಸದಾನಂದ