ಮೈಸೂರು, ಜೂ. 16: ಸಾಂಸ್ಕೃತಿಕ ನಗರಿಯ ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆಯಲ್ಲಿ ಯುವರಾಜ ಯದುವೀರ್, ತ್ರಿಷಿಕಾ ಹರ್ಷವರ್ಧನ್ ಮದುವೆ ಸಿದ್ಧತೆ ಜೋರಾಗಿದೆ. ಇದರ ಬಿಸಿ ಅರಮನೆ ನೋಡೋಕೆ ಬರೋ ಪ್ರವಾಸಿಗರಿಗೆ ತಟ್ಟಿದೆ. ಇದೇ ತಿಂಗಳ 24 ರಿಂದ 29 ರವರೆಗೆ ಯುವರಾಜನ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಹೀಗಾಗಿ 6 ದಿನ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕುವಂತೆ ರಾಜಮನೆತನ ಅರಮನೆ ಆಡಳಿತ ಮಂಡಳಿಗೆ ಪತ್ರ ಬರೆದಿದೆ. 1998ರ ವರೆಗೂ ಅರಮನೆ ರಾಜ ವಂಶಸ್ಥರ ವಶದಲ್ಲಿತ್ತು. ಆದ್ರೆ ಜೆ.ಹೆಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು. ಅಂದಿನಿಂದ ಯಾವದೇ ಕಾರ್ಯಕ್ರಮ ನಡೆಸಲು ಸರ್ಕಾರದ ಒಪ್ಪಿಗೆ ಬೇಕು. ಸದ್ಯ ರಾಜಮನೆತನ ಬರೆದ ಪತ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮುಂದಿದ್ದು ಒಪ್ಪಿಗೆ ಸಿಗುವ ಸಾಧ್ಯತೆಯಿದೆ.