*ಗೋಣಿಕೊಪ್ಪ, ಅ. 1: ಮೈ ನವಿರೇಳಿಸುವ ನಾಲ್ಕುಚಕ್ರ ವಾಹನ ಚಾಲಕರ ಸಾಹಸಮಯ ಚಾಲನೆ ನೋಡುಗರನ್ನು ರೋಮಾಂಚನಗೊಳಿಸಿತು. ಅಂಕುಡೊಂಕು ರಸ್ತೆಯ ನಡುವೆ ದೂಳೆಬ್ಬಿಸುತ್ತಾ ಗಾಳಿಗೂ ಸವಾಲೆಸೆಯುವಂತೆ ಮುನ್ನುಗ್ಗುತ್ತಿದ್ದ ಕಾರು, ಜೀಪುಗಳ ರೋಚಕ ಚಾಲನೆ ಕ್ರೀಡಾಭಿಮಾನಿಗಳನ್ನು ಮುದಗೊಳಿಸಿತು.ಹರಿಶ್ವಂದ್ರಪುರ ಮನೆಯಪಂಡ ಅಯ್ಯಪ್ಪ ಅವರ ಗದ್ದೆಯಲ್ಲಿ ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ಮತ್ತು ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ನಡೆದ 14ನೇ ವರ್ಷದ ರಾಷ್ಟ್ರ ಮಟ್ಟದ ದ್ವಿಚಕ್ರ ಮತ್ತು ನಾಲ್ಕು ಚಕ್ರ ಆಟೋ ಕ್ರಾಸ್ ಸ್ಪರ್ಧೆಯಲ್ಲಿ ಮೊದಲ ದಿನವೇ ರ್ಯಾಲಿ ಪಟುಗಳು ಸಾಹಸಮಯ ಪ್ರದರ್ಶನ ನೀಡಿದರು. ರಾಜ್ಯದ ಹಲವು ಭಾಗಗಳಿಂದ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಸಾಹಸ ಕ್ರೀಡಾ ಸ್ಪರ್ಧಿಗಳು ಭಾಗವಹಿಸಿ ಆಟೋ ಕ್ರಾಸ್‍ಗೆ ಮೆರುಗು ತಂದರು.

ರ್ಯಾಲಿಯ ನಾಲ್ಕು ಚಕ್ರವಾಹನಗಳಲ್ಲಿ 13 ವಿಭಾಗದಲ್ಲಿ ಸ್ಪರ್ಧೆ ನಡೆಯಿತು.. 800ಸಿ.ಸಿ 1300 ಸಿ.ಸಿ ನಾಮಿಸ್ ಕ್ಲಾಸ್ ಕೂರ್ಗ್ ಓಪನ್ ಇಂಡಿಯನ್ ಓಪನ್, ಜಿಪ್ಸಿ ಕ್ಲಾಸ್, ಜೀಪ್ ಕ್ಲಾಸ್, ಲೇಡಿಸ್ ಕ್ಲಾಸ್, ಡಿಸಲ್ ಕ್ಲಾಸ್, ಅನ್‍ರಿಸ್ಟ್ರಿಟೆಡ್ ಕ್ಲಾಸ್, ರೇಸ್ ಫಾರ್ ರೋಲ್ ಕೇಬ್ ಕ್ಲಾಸ್ ನಡೆಯಿತು. ಮಹಿಳೆಯರು ಸಹ ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿದ್ದು ವಿಶೇಷತೆಯನ್ನು ತಂದಿತು.

ಸಾಹಸಮಯ ಕ್ರೀಡೆಗೆ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಸಿ.ಪಿ. ರಾಜು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಜಮ್ಮಡ ಕರುಂಬಯ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಚೆಪ್ಪುಡಿರ ಮಾಚಯ್ಯ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಪ್ರಮುಖರಾದ ಚೆಟ್ರುಮಾಡ ಬಿದ್ದಪ್ಪ, ಡಾ. ಅಮೃತ್ ನಾಣಯ್ಯ,

(ಮೊದಲ ಪುಟದಿಂದ) ಪವಿನ್, ಹೇಮಂತ್ ಅಚ್ಚಪ್ಪ, ಕೀರ್ತಿ ಕಿರಣ್, ಸೌತ್ ಕೂರ್ಗ್ ಫಾಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಡಿ. ಮಾದಪ್ಪ, ಸದಸ್ಯರಾದ ಸಿ.ಕೆ. ಬೋಪಣ್ಣ, ಕಿಲನ್ ಗಣಪತಿ, ಕುಲ್ಲಚಂಡ ಚಿಣ್ಣಪ್ಪ, ಪೂವಣ್ಣ, ಪಂದಿಯಂಡ ಹರೀಶ್ ಹಾಜರಿದ್ದರು.

2ನೇ ದಿನ ಭಾನುವಾರ ದ್ವಿಚಕ್ರ ರ್ಯಾಲಿಯಲ್ಲಿ ಕೂರ್ಗ್‍ಬಾಯ್ಸ್ ಓಪನ್, ಕೂರ್ಗ್ ನಾವಿಸ್ ಓಪನ್ , ನ್ಯೂಬಾಯ್ಸ್ ನಾವಿಸ್ ಓಪನ್, ಟಿ.ವಿಎಸ್ ಓಪನ್, 4 ಸ್ಟ್ರೋಕ್ ಓಪನ್, 2 ಸ್ಟ್ರೋಕ್ ಓಪನ್, ಮಾಡಿಪೈೀಡ್ ಓಪನ್, ಟಿವಿಎಸ್ ಮೋಪೇಡ್ ಕ್ಲಾಸ್ , ಸ್ಕೂಟರ್ ಓಪನ್ ಕ್ಲಾಸ್, ಕೆ.ಟಿಎಂ ಡ್ಯೂಕ್ ಓಪನ್, ಬುಲೆಟ್ ಓಪನ್, ಇಂಡಿಯನ್ ಓಪನ್ ಹಾಗೂ ಇಂಡಿಯನ್ ಎಕ್ಸ್‍ಪರ್ಟ್ ಸ್ಪರ್ಧೆ ನಡೆಯಲಿದೆ.

ಚಿತ್ರ ವರದಿ: ಎನ್,ಎನ್ ದಿನೇಶ್ .