ನಾಪೆÇೀಕ್ಲು, ಡಿ. 14: ಮುಂದಿನ ಏಪ್ರಿಲ್ 17ರಿಂದ ಆರಂಭಗೊಳ್ಳುವ ಕೊಡವ ಕೌಟುಂಬಿಕ ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ನೂತನ ಮೈದಾನ ನಿರ್ಮಿಸುವ ಸಲುವಾಗಿ ಭೂಮಿ ಪೂಜೆ ನಡೆಸುವದರ ಮೂಲಕ ಕುಟುಂಬದ ಹಿರಿಯ ಹಾಗೂ ಪಟ್ಟೇದಾರ ಪೆÇ್ರ. ಪೆÇನ್ನಪ್ಪ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಹಾಕಿ ನಮ್ಮೆಯ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಏಪ್ರಿಲ್ 17ರಿಂದ ಮೇ. 9ರ ವರೆಗೆ ಹಾಕಿ ಹಬ್ಬವನ್ನು ನಡೆಸಲು ತೀರ್ಮಾನಿಸಿದಂತೆ ನೂತನ ಮೈದಾನ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ರೂ. 2 ಲಕ್ಷ ಹಾಗೂ ಗ್ರಾಮ ಪಂಚಾಯಿತಿಯ ರೂ. 2 ಲಕ್ಷ ನೆರವು ನೀಡಿದೆ. ಹಾಕಿ ಉತ್ಸವ ಚೆರಿಯಪರಂಬುವಿನ ಎರಡು ಹಾಗೂ ಕಾಲೇಜು ಸಮೀಪವಿರುವ ಒಂದು ಮೈದಾನದಲ್ಲಿ ನಡೆಯಲಿದೆ. ಪ್ರಾಥಮಿಕ ಶಾಲಾ ಮೈದಾನವನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಹಾಕಿ ಉತ್ಸವವನ್ನು ಗಿನ್ನಿಸ್ ರೆಕಾರ್ಡ್‍ನಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಹಾಕಿ ಉತ್ಸವ ಸಂಚಾಲಕ ಬಿದ್ದಾಟಂಡ ಟಿ. ಪ್ರದೀಪ್ ಮಾತನಾಡಿ ಕೊಡವ ಕೌಟುಂಬಿಕ ಹಾಕಿ ಉತ್ಸವ 20 ವರ್ಷವನ್ನು ದಾಟಿ 21ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸ್ಥಾನ ಪಡೆದಿದೆ. ನಾಲ್ಕುನಾಡಿನಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಆಸಕ್ತಿ ಇದ್ದು, ಬಿದ್ದಾಟಂಡ ಕಪ್ ಹಾಕಿ ಉತ್ಸವವನ್ನು ಇಡೀ ನಾಡಿನ ಉತ್ಸವದಂತೆ ಅದ್ಧೂರಿಯಿಂದ ನಡೆಸಲು ಪ್ರಯತ್ನಿಸಲಾಗುವದು. ಇದಕ್ಕಾಗಿ ಮೈದಾನ ಸೇರಿದಂತೆ, ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಮೈದಾನ ಸಮಿತಿ ಅಧ್ಯಕ್ಷ ಬಿದ್ದಾಟಂಡ ಬಿ.ಬೆಳ್ಯಪ್ಪ ಮಾತನಾಡಿ ಜನತೆಯ ನಿರೀಕ್ಷೆಗೆ ಪೂರಕವಾಗಿ ಎಲ್ಲಾ ಜನರ ಸಹಕಾರದೊಂದಿಗೆ ಈ ಉತ್ಸವವನ್ನು ನಡೆಸಲಾಗುವದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಕಿ ನಮ್ಮೆಯ ಕಾರ್ಯದರ್ಶಿ ರೋಜಿ ಚಿಣ್ಣಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಬಿ.ಎಸ್.ಬಬ್ಬು ಬೋಪಣ್ಣ, ಬಿ.ಎಸ್.ಸಂಪತ್ತು, ಡಿಕ್ಕಿ ಸೋಮಯ್ಯ, ಪಾಪ ಮುದ್ದಯ್ಯ, ಪೂಣಚ್ಚ, ಚಿಟ್ಟಿಯಪ್ಪ, ಹರ್ಷ ನಾಣಯ್ಯ, ಕಾವೇರಮ್ಮ, ಪ್ರಭಾ ಬೆಳ್ಯಪ್ಪ, ಸ್ವರ್ಣ, ಮಾಯಾ, ಸುಮನ್, ಮಮತ ಚಿಣ್ಣಪ್ಪ, ಗುತ್ತಿಗೆದಾರ ಜಗದೀಶ್ ರೈ ಮತ್ತಿತರರಿದ್ದರು.