ಹೊದ್ದೂರು, ಡಿ. 21: ಮೂರ್ನಾಡಿನ ಮಾರುತಿ ಶಾಲೆಯಲ್ಲಿ ಪೋಷಕರ ದಿನಾಚರಣೆ ಇತ್ತೀಚೆಗೆ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಂಡ ಕೆ. ಅಪ್ಪಚ್ಚು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಂಡ ತಂಗಮ್ಮ ಅಪ್ಪಚ್ಚು ಪಾಲ್ಗೊಂಡಿದ್ದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲೆ ಮುಂಡೋಟಿರ ರಾಣಿ ಅಪ್ಪಯ್ಯ ವಾಚಿಸಿದರು. ಕಾರ್ಯಕ್ರಮದಲ್ಲಿ ದತ್ತಿನಿಧಿ, ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಗಣ್ಯರು ವಿತರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಅರುಣ್, ಕಾರ್ಯದರ್ಶಿ ಸಿ. ಈ. ದೇವಯ್ಯ, ನಿರ್ದೇಶಕರುಗಳಾದ ನಾಳೆಯಂಡ ಪ್ರೀತಂ ಪೊನ್ನಪ್ಪ, ನುಚ್ಚಿಮಣಿಯಂಡ ಬೆಳ್ಯಪ್ಪ, ಗಿಲ್ ಸೋಮಯ್ಯ, ಮುಂಡಂಡ ಮುತ್ತಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.