ನಾಪೆÇೀಕ್ಲು, ಮೇ. 11: ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ದೊಡ್ಡಪುಲಿಕೋಟು ಮುಕ್ಕಾಟಿರ ಕುಟುಂಬದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ 17ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್‍ನ ಇಪ್ಪತ್ತಮೂರನೇ ದಿನದ ಪಂದ್ಯಾಟದಲ್ಲಿ ನಂದೇಟಿರ, ಐಚೋಡಿಯಂಡ, ಕರವಂಡ, ಕಡೇಮಡ, ಕಾಣತಂಡ, ಮೇದುರ, ಅಜ್ಜಿಕುಟ್ಟಿರ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಪಟ್ಟಡ ಮತ್ತು ನಂದೇಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ನಂದೇಟಿರ ತಂಡ 2 ವಿಕೆಟ್ ನಷ್ಟಕ್ಕೆ 43 ರನ್‍ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಪಟ್ಟಡ ತಂಡ 4 ವಿಕೆಟ್ ಕಳೆದುಕೊಂಡು 37 ರನ್‍ಗಳಿಸಿ ಸೋಲನುಭವಿಸಿತು. ಆದೇಂಗಡ ಮತ್ತು ಐಚೋಡಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐಚೋಡಿಯಂಡ ತಂಡ 1 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದರೆ, ಅದನ್ನು ಬೆನ್ನಟ್ಟಿದ ಆದೇಂಗಡ ತಂಡ 4 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ ಪರಾಭವಗೊಂಡಿತು. ಕರವಂಡ ಮತ್ತು ಬೊಳ್ಳಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರವಂಡ ತಂಡ 5 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದರೆ, ಅದನ್ನು ಹಿಂಬಾಲಿಸಿದ ಬೊಳ್ಳಚೆಟ್ಟಿರ ತಂಡ 4 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬೊಳ್ಯಪಂಡ ಮತ್ತು ಕಡೇಮಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಳ್ಯಪಂಡ ತಂಡ 4 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದರೆ, ಅದನ್ನು ಬೆನ್ನಟ್ಟಿದ ಕಡೇಮಡ ತಂಡ 2 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿ ಜಯಗಳಿಸಿತು. ಮುಕ್ಕಾಟಿರ (ಬೇತ್ರಿ) ಮತ್ತು ಕಾಣತಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಣತಂಡ ತಂಡ 4 ವಿಕೆಟ್ ನಷ್ಟಕ್ಕೆ 58 ರನ್‍ಗಳ ಸವಾಲೊಡ್ಡಿತು. ಇದನ್ನು ಬೆನ್ನಟ್ಟಿದ ಮುಕ್ಕಾಟಿರ ತಂಡ 4 ವಿಕೆಟ್ ಕಳೆದುಕೊಂಡು 31 ರನ್ ಗಳಿಸಿ ಸೋತಿತು. ಕೈಬುಲಿರ ಮತ್ತು ಮೇದುರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮೇದುರ ತಂಡ 3 ವಿಕೆಟ್ ನಷ್ಟಕ್ಕೆ 50 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಕೈಬುಲಿರ ತಂಡ 5 ವಿಕೆಟ್ ನಷ್ಟಕ್ಕೆ 31 ರನ್‍ಗಳಿಸಿ ಸೋಲೊಪ್ಪಿ ಕೊಂಡಿತು. ಅಜ್ಜಿಕುಟ್ಟಿರ ಮತ್ತು ಚಂಗುಲಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಅಜ್ಜಿಕುಟ್ಟಿರ ತಂಡ 2 ವಿಕೆಟ್ ನಷ್ಟಕ್ಕೆ 57 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಚಂಗುಲಂಡ ತಂಡ 4 ವಿಕೆಟ್ ನಷ್ಟಕ್ಕೆ 35 ರನ್‍ಗಳಿಸಿ ಅಜ್ಜಿಕುಟ್ಟಿರ ತಂಡಕ್ಕೆ ಶರಣಾಯಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಟ್ಟಡ ಅಯ್ಯಪ್ಪ, ಆದೇಂಗಡ ನಿಶನ್ ಕುಶಾಲಪ್ಪ, ಬೊಳ್ಳಚೆಟ್ಟಿರ ಅಚ್ಚಪ್ಪ, ಬೊಳ್ಯಪಂಡ ದರ್ಶನ್ ಪೂವಯ್ಯ, ಮುಕ್ಕಾಟಿರ ಪೆÇನ್ನಣ್ಣ, ಕೈಬುಲಿರ ಲೋಹಿತ್, ಚಂಗುಲಂಡ ರೋಶನ್ ಪಡೆದರು.