ಮಡಿಕೇರಿ, ಡಿ. 28 : 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 9 ರಿಂದ 27ರವರೆಗೆ ನಡೆಯಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2017ರ ಮಾರ್ಚ್ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇಂತಿದೆ. ಮಾರ್ಚ್ 9 ರಂದು ಜೀವಶಾಸ್ತ್ರ ಮತ್ತು ಇತಿಹಾಸ, ಮಾರ್ಚ್ 10 ರಂದು ಎಲೆಕ್ಟ್ರಾನಿಕ್ಸ್ ಮತ್ತು ಗಣಕ ವಿಜ್ಞಾನ, ಮಾರ್ಚ್ 11 ರಂದು ತರ್ಕಶಾಸ್ತ್ರ, ಶಿಕ್ಷಣ, ಬೇಸಿಕ್ ಮ್ಯಾಥ್ಸ್, ಮಾರ್ಚ್ 13 ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಮಾರ್ಚ್ 14 ರಂದು ಗಣಿತ, ಮಾರ್ಚ್ 15 ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮಾರ್ಚ್ 16 ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ, ಮಾರ್ಚ್ 17 ರಂದು ಭೌತಶಾಸ್ತ್ರ, 18 ರಂದು ಮನಃಶಾಸ್ತ್ರ, ಮಾರ್ಚ್ 20 ರಂದು ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಐಚ್ಚಿಕ ಕನ್ನಡ, ಮಾ.21 ರಂದು ರಾಜ್ಯಶಾಸ್ತ್ರ, ಮಾ.22 ರಂದು ಹಿಂದಿ ಮತ್ತು ತೆಲುಗು, ಮಾ. 23 ರಂದು ಕನ್ನಡ, ತಮಿಳು, ಮಲಯಾಳಂ, ಅರೇಬಿಕ್, ಮಾ. 24 ರಂದು ಸಂಸ್ಕøತ, ಮರಾಠಿ, ಉರ್ದು, ಫ್ರೆಂಚ್, ಮಾ.25 ರಂದು ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಗೃಹ ವಿಜ್ಞಾನ, ಮಾರ್ಚ್ 27 ರಂದು ಇಂಗ್ಲೀಷ್ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ. ಶಿಖಾ ಅವರು ತಿಳಿಸಿದ್ದಾರೆ.