ಮಡಿಕೇರಿ, ಜೂ.17: ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಆಧಾರ್ ಕಾರ್ಡುಗಳ ಬೆರಳಚ್ಚು ಪ್ರತಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ ಇವರಲ್ಲಿ ತಮ್ಮ ಆರ್ಮಿ ನಂಬರ್, ರ್ಯಾಂಕ್ ಮತ್ತು ರೆಕಾರ್ಡ್ ವಿಳಾಸವನ್ನು ನಮೂದಿಸಿ ಸಲ್ಲಿಸುವಂತೆ, ಪಿಂಚಣಿ ಬ್ಯಾಂಕ್ ಖಾತೆಗೆ ಜೋಡಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಕೋರಿದ್ದಾರೆ.