ಕೂಡಿಗೆ, ಆ. 24: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚಿಕ್ಕನಾಯಕನಹೊಸಳ್ಳಿ ಗ್ರಾಮದ ನಿವಾಸಿ, ತೊರೆನೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಟಿ.ಕೆ. ವಸಂತ್ ಎಂಬವರ ಮೇಲೆ ಪಕ್ಕದ ಜಮೀನಿನವರು ಜಮೀನಿಗೆ ತೆರಳುವ ದಾರಿ ಹಾಗೂ ನೀರಿನ ವಿಚಾರವಾಗಿ ಟಿ.ಕೆ. ವಸಂತ್‍ನ ಸಹೋದರ ಸುರೇಶ್ ಎಂಬವರೊಂದಿಗೆ ಮಾತಿಗೆ ಮಾತು ಬೆಳೆಸಿ ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಮಧ್ಯೆ ಪ್ರವೇಶಿಸಿ ಸಮಾಧಾನ ಪಡಿಸುವ ಸಂದರ್ಭ ಏಕಾಏಕಿಯಾಗಿ ಟಿ.ಕೆ.ವಸಂತ್ ಎಂಬವರಿಗೆ ಮಧು ಮತ್ತು ರುದ್ರಪ್ಪ ಎಂಬವರು ಕತ್ತಿ ಮತ್ತು ದೊಣ್ಣೆಯಿಂದ ತಲೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ವಸಂತ್ ಎಂಬವರಿಗೆ ತೀವ್ರ ರಕ್ತಸ್ರಾವವಾಗಿ ಕುಶಾಲನಗರ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ದಾಖಲಿಸಲಾಗಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.