ಶನಿವಾರಸಂತೆ, ಜೂ. 15: ಬೆಸೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕಭಂಡಾರ ಗ್ರಾಮದ ವಿವಾಹಿತ ಮಹಿಳೆ ಸ್ಕೂಟಿಯಲ್ಲಿ ತನ್ನ ಮನೆಗೆ ಹೋಗುತ್ತಿರುವಾಗ ಕಟ್ಟೆಪುರ ಗ್ರಾಮದ ಸಂತೋಷ ಎಂಬಾತ ತನ್ನ ಮೋಟಾರ್ ಸೈಕಲ್ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಬಲಾತ್ಕಾರವಾಗಿ ಕೈ ಹಿಡಿದು ಎಳೆದು, ಜಾತಿ ನಿಂದನೆ ಮಾಡಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿಕ್ಕಭಂಡಾರ ಗ್ರಾಮದ ನಿವಾಸಿ ಪಾರ್ವತಿ ಸುರೇಶ್ ಸಿ.ಜೆ. ಎಂಬವರು ತಾ. 9 ರಂದು ಸಂಜೆ 5.30 ಗಂಟೆಗೆ ತನ್ನ ಸ್ಕೂಟಿಯಲ್ಲಿ ಬೆಸೂರಿನಿಂದ ನಿಲುವಾಗಿಲು ಮಾರ್ಗವಾಗಿ ಚಿಕ್ಕಭಂಡಾರದ ತನ್ನ ಮನೆಗೆ ಹೋಗುತ್ತಿರುವಾಗ ಕಟ್ಟೆಪುರ ಗ್ರಾಮದ ನಾಗರಾಜು ಎಂಬವರ ಮಗ ಸಂತೋಷ ಎಂಬಾತ ಮೋಟಾರ್ ಸೈಕಲ್ನಲ್ಲಿ ಹಿಂಬಾಲಿಸಿಕೊಂಡು ಬಂದು ಮಾರ್ಗಮಧ್ಯೆ ಸ್ಕೂಟಿಯನ್ನು ತಡೆದು ನಿಲ್ಲಿಸಿ ಅಡ್ಟಗಟ್ಟಿ ಬಲಾತ್ಕಾರವಾಗಿ ಕೈ ಹಿಡಿದು ಎಳೆದು, ವಿರೋಧ ವ್ಯಕ್ತಪಡಿಸಿದಾಗ ಜಾತಿ ನಿಂದನೆ ಮಾಡಿ ಎಳೆದಾಡಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಗಂಡನಿಗೆ ತಿಳಿಸಲಾಗಿ ತಾ. 14 ರಂದು ನೀಡಿದ ದೂರಿನ ಮೇರೆ ಶನಿವಾಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ಎಂ.ಹೆಚ್. ಗೋವಿಂದ್ ವಿಧಿ 341, 354 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.