ಮಡಿಕೇರಿ, ಸೆ. 13: ‘ತಂಬಿಟ್ಟು, ಅಡಿಕೆ ಹಿಟ್ಟು.., ಶುಂಠಿ ಪಜ್ಜಿ.., ಕಯ್ಯುಳಿ ಪಜ್ಜಿ.., ಸುಕ್ರುಂಡೆ.., ಕರ್ಜಿಕಾಯಿ.., ಹೋಳಿಗೆ, ವಡೆ, ಕಡುಂಬಿಟ್ಟು, ಕಾಳ್ ಗೈಪು..,’ ಇವೇ.., ಹೀಗೆ ಹತ್ತಾರು ಬಗೆಯ ತಿಂಡಿ-ತಿನಿಸುಗಳು...’ ಬಿಸಿ-ಬಿಸಿಯಾಗಿ ಒಂದೇ ಮೇಜಿನ ಮೇಲೆ ಇರುವದನ್ನು ನೋಡಿ ಎಲ್ಲರ ಬಾಯಲ್ಲಿ ನೀರು.., ತಿನಿಸುಗಳ ಘÀಮ-ಘಮ ಸುತ್ತೆಲ್ಲ ಹರಿಡಿತ್ತು... ಸಾಮಾನ್ಯವಾಗಿ ಹಬ್ಬ-ಹರಿದಿನ ಅದರಲ್ಲೂ ‘ಕೊಡಗಿನ ಹುತ್ತರಿ’ ಹಬ್ಬದಲ್ಲಿ ಕಂಡು ಬರುವ ಈ ತಿಂಡಿ-ತಿನಿಸುಗಳು ಇಂದು ಮರಗೋಡು ಗೌಡ ಸಮಾಜದಲ್ಲಿ ಘಮ-ಘಮಿಸಿದವು.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗೌಡ ಸಮಾಜದ ಸಹಯೋಗದೊಂದಿಗೆ ಏರ್ಪಡಿಸ ಲಾಗಿದ್ದ ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡುಗೆ ತರಬೇತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಎಂಬ ವಿಭಿನ್ನ ಕಾರ್ಯಕ್ರಮದಲ್ಲಿ ಈ ಎಲ್ಲಾ ಖಾದ್ಯಗಳನ್ನು ತಯಾರಿಸಲಾಯಿತು.
ಉದ್ಘಾಟನಾ ದಿನವಾದ ಇಂದು ಕುಶಾಲನಗರದ ಮಹಿಳೆಯ ತಂಡ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ತಿಂಡಿ-ತಿನಿಸುಗಳನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟರು. ಸಂಜೆ ಸ್ಥಳದಲ್ಲೇ ಮಾಡಿದ ಬಿಸಿ ಬಿಸಿ ತಿಂಡಿ-ತಿನಿಸುಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಉಣಬಡಿಸ ಲಾಯಿತು. ಇಂದಿನಿಂದ ತಾ. 17ರ ವರೆಗೆ 5 ದಿನಗಳ ಕಾಲ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿವಿಧ ಕಡೆಗಳ ತಂಡದವರು ಆಗಮಿಸಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಿದ್ದಾರೆ.
ಪರಿಚಯಿಸುವ ಪ್ರಯತ್ನ
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ನಮ್ಮ ಜೀವನ ಕ್ರಮದಲ್ಲಿ ಆಹಾರ ಪದ್ಧತಿ ಕೂಡ ಬಹು ಮುಖ್ಯವಾಗಿದೆ. ಪ್ರಸ್ತುತ ನಾವೆಲ್ಲರೂ ಆಧುನಿಕ ಶೈಲಿಯ ಆಹಾರಕ್ಕೆ ಒಗ್ಗಿಕೊಂಡಿದ್ದೇವೆ. ಕುರುಕು ತಿಂಡಿಗಳೇ ಅಧಿಕವಾಗಿವೆ.