*ಗೋಣಿಕೊಪ್ಪಲು, ಜ. 2: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಕೊಡಗಿನ ಸಿದ್ದಾಪುರಕ್ಕೆ ಭೇಟಿ ನೀಡಿದ್ದರು. ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ಶಿವರಾಜ್ಸಿಂಗ್ ಚೌವ್ಹಾಣ್ ‘ಓ! ವಾಟ್ಎ ಬ್ಯೂಟಿಫುಲ್ ಫ್ಲೇಸ್’ ಎಂದು ಹೇಳಿದರು.ಕುಟುಂಬ ಸಮೇತ ವಿಶ್ರಾಂತಿ ಗಾಗಿ ಬಂದು ಆರೆಂಜ್ ಕೌಂಟಿಯ ಕಾಫಿ ತೊಟದಲ್ಲಿ ಕೆಲ ಹೊತ್ತು ಸುತ್ತಾಡಿದ ಅವರು ತಮ್ಮನ್ನು ಭೇಟಿ ಮಾಡಿದ್ದ ಶಾಸಕ ಕೆ.ಜಿ. ಬೋಪಯ್ಯ ಅವರೊಂದಿಗೆ ಕೊಡಗಿನ ಸಂಸ್ಕøತಿ, ಪದ್ಧತಿ-ಪರಂಪರೆಗಳನ್ನು ಕೇಳಿ ತಿಳಿದುಕೊಂಡರು.
ಕೊಡಗಿನ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೆ. ಆದರೆ ನೋಡಿರಲಿಲ್ಲ. ಇದೀಗ ಇಲ್ಲಿನ ಪರಿಸರವನ್ನು ವೀಕ್ಷಿಸಿ ಸಂತಸವಾಗಿದೆ ಎಂದು ಹೇಳಿದರು.
ಮಾರ್ಕೇಟಿಂಗ್ ಫೆಡರೇಷನ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮನು ಮುತ್ತಪ್ಪ, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಜೀವನ್ ಹಾಜರಿದ್ದರು.