ಸುಂಟಿಕೊಪ್ಪ, ಜು. 19: ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ಹನೀಫ್ ಎಂಬವರ ಮನೆಯ ಹಿಂಭಾಗದ ಬರೆಯು ಅಪಾಯದ ಅಂಚಿನಲ್ಲಿದ್ದು ಸ್ಥಳಕ್ಕೆ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹಾಗೂ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಭೇಟಿ ನೀಡಿ ಪರಿಶೀಲಿಸಿದರು. ಮಧುರಮ್ಮ ಬಡಾವಣೆಯ ಹನೀಫ್ ಎಂಬವರ ಮನೆಯ ಹಿಂಭಾಗದ ಬರೆಯು ಅಪಾಯದ ಅಂಚಿನಲ್ಲಿ ರುವದನ್ನು ಮನಗಂಡು ಸ್ಥಳಕ್ಕೆ ಜಿ.ಪಂ. ಸದಸ್ಯೆ, ಅಧ್ಯಕ್ಷೆ ಹಾಗೂ ಈ ವಿಭಾಗದ ಸದಸ್ಯರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ವಿಶೇಷ ಅನುದಾನಗಳ ಮುಖಾಂತರ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯ ರಜಾಕ್ ಸ್ಥಳೀಯ ನಿವಾಸಿ ಇಬ್ರಾಹಿಂ ಇದ್ದರು.