ಶ್ರೀಮಂಗಲ, ನ. 16: ಶ್ರೀಮಂಗಲ ಠಾಣಾ ವ್ಯಾಪ್ತಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕ ಮದುವೆ ಮಾಡಿಕೊಳ್ಳುವದಾಗಿ ನಂಬಿಸಿ ಕಳೆದ 14 ತಿಂಗಳಿನಿಂದ ದೈಹಿಕ ಸಂಪರ್ಕ ಬೆಳೆಸಿ ಇದೀಗ ಪರಾರಿಯಾಗಿದ್ದು, ಈ ಯುವಕನ ಮೇಲೆ ಬುಧವಾರ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ. ಯುವಕನ ಮೇಲೆ ದಲಿತ ದೌರ್ಜನ್ಯ ಕಾಯಿದೆ ಹಾಗೂ ಅತ್ಯಾಚಾರ ಪ್ರಕರಣದಡಿ ಮೊಕದ್ದಮ್ಮೆ ದಾಖಲಿಸಿಕೊಳ್ಳಲಾಗಿದೆ.
ಘಟನೆಯ ವಿವರ: ಕಾಕೂರು ಪೈಸಾರಿ ನಿವಾಸಿ ಶಶಿ ಮೂಲತಃ ಯುವಕನ ಮೇಲೆ ದಲಿತ ದೌರ್ಜನ್ಯ ಕಾಯಿದೆ ಹಾಗೂ ಅತ್ಯಾಚಾರ ಪ್ರಕರಣದಡಿ ಮೊಕದ್ದಮ್ಮೆ ದಾಖಲಿಸಿಕೊಳ್ಳಲಾಗಿದೆ.