ಮಡಿಕೇರಿ, ಅ. 3 : ಮಡಿಕೇರಿ ದಸರಾ ಜನೋತ್ಸವದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ತಾ.5ರಿಂದ ಆರಂಭಗೊಳ್ಳಲಿದೆ. ಅ.8ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಕೊನೆಯ ದಿನದ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಪ್ರಮುಖ ಆಕರ್ಷಣೆಯಾಗಿದೆ ಎಂದು ನಗರ ದಸರಾ ಕ್ರೀಡಾ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಡಿ.ಸದಾ ಮುದ್ದಪ್ಪ, ನಾಲ್ಕು ದಿನಗಳ ಕಾಲ ನಡೆಯುವ ಕ್ರೀಡಾ ಕೂಟದ ಕುರಿತು ಮಾಹಿತಿ ನೀಡಿದರು. ನಗರದ ಜ. ತಿಮ್ಮಯ್ಯ ಕ್ರಿಡಾಂಗಣದಲ್ಲಿ ತಾ.5 ರಂದು ಮೆರಥಾನ್ಗೆ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಚಾಲನೆ ನೀಡಲಿದ್ದಾರೆ. ಹಿರಿಯ ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್ ಹಾಗೂ ಪೆÇಲೀಸ್ ಉಪನಿರೀಕ್ಷಕ ಎಂ.ಎಂ. ಭರತ್ ಈ ಸಂದರ್ಭ ಹಾಜರಿರುವರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ತಾ.6 ರಂದು ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆÉಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭಾ ಪೌರಾಯುಕ್ತೆ ಪುಷ್ಪಾವತಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ಕೆ.ಎಂ. ಗಣೇಶ್, ಪಿ.ಡಿ. ಪೆÇನ್ನಪ್ಪ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಕಿ ಪಟು ನುಡುಮಂಡ ನಿಶಾ ನಂಜಪ್ಪ ಅವರನ್ನು ಸನ್ಮಾನಿಸಲಾಗುವದೆಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ಮಾತನಾಡಿ, ತಾ.8 ರಂದು ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಉದ್ಯಮಿ ನಾಪಂಡ ಮುತ್ತಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿಯ ಎ.ವಿ. ಹರ್ಷ ಶೆಟ್ಟಿ, ಮುಳಿಯ ಗ್ರೂಪ್ನ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಪಾಲ್ಗೊಳ್ಳ್ಳಲಿದ್ದಾರೆ ಎಂದು ತಿಳಿಸಿದ ಸದಾ ಮುದ್ದಪ್ಪ, ಕಬಡ್ಡಿ ಪಂದ್ಯಾವಳಿಯನ್ನು 25 ತಂಡಗಳಿಗಷ್ಟೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.
ಆಟೋಟ ಸ್ಪರ್ಧೆಗಳ ವಿವರ
ತಾ.5 ರಂದು ಮೆರಥಾನ್ ಬೆಳಗ್ಗೆ 6.30 ಕ್ಕೆ ನಗರದ ಜ|ತಿಮ್ಮಯ್ಯ ವೃತ್ತದಿಂದ ಆರಂಭಗೊಳ್ಳಲಿದೆ. ಇದರಲ್ಲಿ 1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ 1ಕಿ.ಮೀ, 4 ರಿಂದ 5ನೇ ತರಗತಿ ಮಕ್ಕಳಿಗೆ 1.5 ಕಿ.ಮೀ., 6 ರಿಂದ 7ನೇ ತರಗತಿಗೆ 2 ಕಿ.ಮೀ., 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮೆರಥಾನ್ ನಡೆಯಲಿದೆ. ಪುರುಷರಿಗೆ 10 ಕಿ.ಮೀ. ಮತ್ತು ಮಹಿಳೆಯರಿಗೆ 5 ಕಿ.ಮೀ.ನ ಮೆರಥಾನ್ ಆಯೋಜಿಸಲಾಗಿದೆ.
ತಾ.6 ರಂದು ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಓಟದ ಸ್ಪರ್ಧೆ, ಮಹಿಳೆÉಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಥ್ರೋಬಾಲ್ ಪಂದ್ಯಾವಳಿ, ಪುರುಷರಿಗಾಗಿ 5 ಆಟಗಾರರ ಫುಟ್ಬಾಲ್ ಪಂದ್ಯಾವಳಿ, ಹಿರಿಯ ನಾಗರಿಕರಿಗೆ 100 ಮೀ.ನಡಿಗೆ, ನಿಧಾನ ಮೋಟಾರ್ ಸೈಕಲ್ ರೇಸ್, ಪತ್ರಕರ್ತರಿಗೆ ಹಾಗೂ ನಗರಸಭಾ ಸದಸ್ಯರಿಗೆ ಹಾಗೂ ನಗರಸಭಾ ನೌಕರರಿಗೆ ಓಟ ಮತ್ತು ಭಾರದ ಗುಂಡು ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ವಾಲಗ ಕುಣಿತದ ಸ್ಪರ್ಧೆ ಕೂಡ ನಡೆಯಲಿದೆ. ಶ್ರೀ ರಾಜರಾಜೇಶ್ವರಿ ಶಾಲಾ ಆವರಣದಲ್ಲಿ ವಿವಿಧ ವಿಭಾಗಗಳಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆಯೆಂದು ಸದಾ ಮುದ್ದಪ್ಪ ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ 9448325904, 9620554587 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷರು ಗಳಾದ ಸುನಿಲ್ ನಂಜಪ್ಪ, ಕೆ.ಎ.ವೇಣು ಕುಮಾರ್ ಹಾಗೂ ಕಾರ್ಯದರ್ಶಿ ಎಂ.ಜಿ. ವಿನೋದ್ ಕುಮಾರ್ ಉಪಸ್ಥಿತರಿದ್ದರು.