ಸೋಮವಾರಪೇಟೆ, ಜ. 6: ಸುಸಂಸ್ಕøತ, ಸುಭೀಕ್ಷ ಸಮಾಜದ ನಿರ್ಮಾಣಕ್ಕೆ ಮಠಾಧೀಶರುಗಳ ಅನಿವಾರ್ಯತೆ ಇದ್ದು, ಸಮಾಜ ಇದನ್ನು ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇಂದು ಸಮಾಜ ಜವಾಬ್ದಾರಿಯನ್ನು ಮರೆತು ಸಾಗುತ್ತಿದೆ ಎಂದು ವಿಷಾದಿಸಿದ ಅವರು, ಸುಸಂಸ್ಕøತ, ಸುಭೀಕ್ಷ ಮತ್ತು ಸದೃಢ ಸಮಾಜದ ನಿರ್ಮಾಣವಾಗ ಬೇಕಾಗಿದೆ. ಇದಕ್ಕೆ ಮಠಾಧೀಶರುಗಳು ಕೂಡ ಮುಂದಾಗಿದ್ದಾರೆ. ಈ ಸಮಾಜ ಅಂತಹವರನ್ನು ಬಳಸಿಕೊಳ್ಳಬೇಕು. ಮಠಾಧೀಶರುಗಳು ತಮ್ಮ ಸರ್ವಸ್ವವನ್ನೆಲ್ಲ ತ್ಯಾಗ ಮಾಡಿ ಸಮಾಜಕ್ಕಾಗಿ ಮುಡಿಪಾಗಿದ್ದಾರೆ. ಇದನ್ನು ಸಮಾಜ ಅರಿತುಕೊಳ್ಳಬೇಕು ಎಂದರು.
ಸಚಿವ ಮಹದೇವ ಪ್ರಸಾದ್ ಹಾಗೂ ಕೊಡ್ಲಿಪೇಟೆಯ ಗಿರೀಶ್ರವರ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಮಹದೇವ ಪ್ರಸಾದ್, ಕೊಡುಗೈ ದಾನಿಗಳಾಗಿದ್ದ ಕೊಡ್ಲಿಪೇಟೆಯ ಗಿರೀಶ್ರವರನ್ನು ಸಮಾಜ ಕಳೆದುಕೊಂಡಿದೆ ಎಂದು ವಿಷಾದಿಸಿದರು. ಸೋಮವಾರಪೇಟೆ ವಿರಕ್ತ ಮಠದ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಸಿ.ವಿ. ವಿಶ್ವನಾಥ್ ಉಪಸ್ಥಿತರಿದ್ದರು.