ಸೋಮವಾರಪೇಟೆ, ನ. 28: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು. ಜೇಸಿ ಸಪ್ತಾಹದ ಅಂಗವಾಗಿ ನಗರದಲ್ಲಿ ಆಯೋಜಿ ಸಿದ್ದ ಮಕ್ಕಳ ಮ್ಯಾರಥಾನ್‍ಗೆ ಚಾಲನೆ ನೀಡಿ ಮಾತನಾಡಿದರು.

ಜೇಸಿ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸಂಸ್ಥೆಯು ಆಯೋಜಿಸಿರುವ ಮ್ಯಾರಥಾನ್ ಸ್ಪರ್ಧೆಗೆ ಮುನ್ನೂರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿರುವದು ನಮ್ಮ ಸಂಸ್ಥೆಯ ಸದಸ್ಯರು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿಲು ಸ್ಪೂರ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿ ದರು. ಈ ಸಂದರ್ಭ ರಾಷ್ಟ್ರೀಯ ಅಥ್ಲೀಟ್ ಕೆ.ಎ. ಪ್ರಕಾಶ್, ಜೇಸಿರೇಟ್ ಅಧ್ಯಕ್ಷೆ ಜ್ಯೋತಿ ರಾಜೇಶ್, ಕಾರ್ಯದರ್ಶಿ ಜ್ಯೋತಿ ಅರುಣ್ ಕುಮಾರ್, ಪದಾಧಿಕಾರಿಗಳಾದ ಎ.ಆರ್. ಮಮತಾ, ಜಯೇಶ್ ಮತ್ತಿತರರು ಇದ್ದರು.

ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುವೆಂಪು ಶಾಲೆಯ ಬಾಲಕ ಪ್ರಜ್ವಲ್ ಯು.ಜೆ. ಪ್ರಥಮ, ಪ್ರತೀಕ್ ಯು.ಜೆ. ದ್ವಿತೀಯ ಹಾಗೂ ಕಾರ್ತಿಕ್ ಬಿ.ವೈ. ತೃತೀಯ ಸ್ಥಾನ ವನ್ನು ಪಡೆದುಕೊಂಡರು. ಬಾಲಕಿ ಯರ ವಿಭಾಗದಲ್ಲಿ ಒಎಲ್‍ವಿ ಕಾನ್ವೆಂಟ್‍ನ ತನುಶ್ರೀ, ಜ್ಞಾನವಿಕಾಸ ಶಾಲೆಯ ಡಿ.ಪಿ. ಪ್ರತೀಕ್ಷ ಹಾಗೂ ಬಿ.ಬಿ. ತನುಶ್ರೀ ಪ್ರಶಸ್ತಿಗೆ ಭಾಜನ ರಾದರು. ಪ್ರೌಢಶಾಲಾ ವಿಭಾಗದಲ್ಲಿ ಸಾಂದೀಪನಿ ಶಾಲೆಯ ಎಸ್.ಎಸ್. ದಕ್ಷ, ಸಂತ ಜೋಸೆಫರ ಪ್ರೌಢ ಶಾಲೆಯ ಸ್ವಾಗತ್ ಕೆ.ಯು., ಕುವೆಂಪು ಶಾಲೆಯ ಅಭಿಷೇಕ್ ಕೆ.ಎಸ್ ಕ್ರಮವಾಗಿ ಮೊದಲ ಮೂರು ಸ್ಥಾನ ಗಳನ್ನು ಹಂಚಿಕೊಂಡರು. ಬಾಲಕಿ ಯರ ವಿಭಾಗದಲ್ಲಿ ಸಾಂದೀಪನಿ ಶಾಲೆಯ ಹರ್ಷಿತಾ, ಧನ್ಯಾ ಹಾಗೂ ಭೂಮಿಕ ಕ್ರಮವಾಗಿ ಮೂರು ಸ್ಥಾನಗಳನ್ನು ಪಡೆದುಕೊಂಡರು.

ಮಕ್ಕಳ ಮ್ಯಾರಥಾನ್ ಸ್ಪರ್ಧೆಗೆ ಮುಂಜಾನೆ ಆರರ ವೇಳೆಗೆ ಯುಕೆಜಿ ಹಾಗು ಒಂದನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅದರಲ್ಲೂ 5 ಕಿ.ಮೀ. ದೂರದ ಮ್ಯಾರಥಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿ ಕ್ರೀಡಾ ಸ್ಪೂರ್ತಿ ಮೆರೆದರು. ಆರ್. ಜನ್ಯ, ಶ್ರೇಯಸ್, ವಿಸ್ಮಯ, ಯದುನಂದನ್ ಅವರುಗಳು ಹೆಚ್ಚಿನ ಸ್ಪೂರ್ತಿಯೊಂದಿಗೆ ಭಾಗವಹಿಸಿದ್ದರು.

ನಂತರ ಪ್ರಾಥಮಿಕ ಹಾಗು ಪೌಢಶಾಲೆಯ ವಿದ್ಯಾರ್ಥಿಗಳಿಗೆ ನಿಧಾನಗತಿಯ ಸೈಕಲ್ ಚಾಲನೆ ಸ್ಪರ್ಧೆ ನಡೆಯಿತು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುವೆಂಪು ಶಾಲೆಯ ರಾಹುಲ್ ಪ್ರಥಮ, ಸಾಂದೀಪನಿ ಶಾಲೆಯ ಮೋಹಿತ್ ದ್ವಿತೀಯ ಹಾಗೂ ಒಎಲ್‍ವಿ ಶಾಲೆಯ ರಿಷೀತ್ ತೃತೀಯ ಸ್ಥಾನವನ್ನು ಪಡೆದು ಕೊಂಡರು. ಪ್ರೌಢಶಾಲಾ ವಿಭಾಗದಲ್ಲಿ ಕುವೆಂಪು ಶಾಲೆಯ ಪುನೀತ್ ಎಸ್ ಪ್ರಥಮ, ಜ್ಞಾನಗಂಗ ಶಾಲೆಯ ಬೇವನ್ ಪ್ರಕಾಶ್ ದ್ವಿತೀಯ ಹಾಗು ಸಾಂದೀಪನಿ ಶಾಲೆಯ ಧನುಷ್ ತೃತೀಯ ಸ್ಥಾನವನ್ನು ಪಡೆದು ಕೊಂಡರು.