ಮಡಿಕೇರಿ, ಅ. 25: ಮಕ್ಕಳಿಗೆ ಪರಿಸರ ಸಂರಕ್ಷಣೆಯ ತಿಳುವಳಿಕೆ ಯನ್ನು ಬಾಲ್ಯದಲ್ಲಿಯೇ ತಿಳಿಸುವ ಅತ್ಯಗತ್ಯ ಇಂದಿನ ಕಾಲ ಘಟ್ಟದಲ್ಲಿದೆ ಎಂದು ರೋಟರಿ ಜಿಲ್ಲೆ 3181ನ ಜಿಲ್ಲಾ ಗವರ್ನರ್ ಡಾ. ಆರ್.ಎಸ್. ನಾಗಾರ್ಜುನ ಹೇಳಿದ್ದಾರೆ.ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಏರ್ಪಡಿಸಲಾಗಿದ್ದ ನಮ್ಮ ಭೂಮಿ ಯೋಜನೆ ಸಂಬಂಧಿತ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಡಾ.ನಾಗಾರ್ಜುನ, ಪರಿಸರದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಅನಿವಾರ್ಯತೆಯಿದೆ. ಈ ಮೂಲಕ ಭವಿಷ್ಯದ ಪ್ರಜೆಗಳಿಗೆ ನಮ್ಮ ನಿಸರ್ಗ ಎಷ್ಟು ಮುಖ್ಯ ಎಂಬದನ್ನು ಬಾಲ್ಯದಲ್ಲಿಯೇ ತಿಳಿಸಬೇಕಾಗಿದೆ ಎಂದರು.
ಮಡಿಕೇರಿ ತನ್ನ ನಿಸರ್ಗ ಸಂಪತ್ತು ಮತ್ತು ದಟ್ಟ ಮಂಜಿನಿಂದ ಸ್ವರ್ಗ ಸಮಾನವಾಗಿತ್ತು.