ಮಡಿಕೇರಿ, ಡಿ. 18: ಮಕ್ಕಂದೂರು ಕೊಡವ ಸಮಾಜ ವತಿಯಿಂದ ಪುತ್ತರಿ ಊರೋರ್ಮೆ ಮತ್ತು ಕೋಲ್ಮಂದ್ ನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಕ್ಕಂದೂರುವಿನ ಭದ್ರಕಾಳಿ ದೇವಾಲಯದಿಂದ ಮಂದ್ವರೆಗೆ ಸಾಂಪ್ರದಾಯಿಕ ಉಡುಪಿನೊಂದಿಗೆ ಮೆರವಣಿಗೆ ನಡೆಸÀಲಾಯಿತು. ಬಳಿಕ ಕೋಲಾಟ, ಕತ್ತಿಯಾಟ, ಪರೆಕಳಿ ಮತ್ತಿತರ ಸಾಂಪ್ರದಾಯಿಕ ನೃತ್ಯಗಳು ನಡೆದವು. ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದು, ಕೊಡವ ಸಂಸ್ಕøತಿ ಮತ್ತು ಆಚಾರ -ವಿಚಾರದ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು.
ಇದೇ ಸಂದರ್ಭ ಪುಟಾಣಿ ಮಕ್ಕಳಿಗೆ ಹಾಡುವ ಸ್ಪರ್ಧೆ, ಕೊಡವ ಕ್ವಿಜ್, ಮನೆಪದ ಬರೆಯುವ ಸ್ಪರ್ಧೆ, ತಿಳಿದು ಮಾತನಾಡುವ ಸ್ಪರ್ಧೆ ಮತ್ತು ಆದರ್ಶ ದಂಪತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.