ಗೋಣಿಕೊಪ್ಪ, ನ. 23: ದೇಶಿಯ ಗೋ ತಳಿಗಳ ಬಗ್ಗೆ ಮಾಹಿತಿ ಮತ್ತು ಸಂಗ್ರಹದೊಂದಿಗೆ, ಗೋ ಸಂತತಿಗಳ ಉಳಿವಿಗಾಗಿ ಮತ್ತು ಜನ ಜಾಗೃತಿ ಉದ್ದೇಶದಿಂದ, ರಾಜ್ಯದ 7 ಜಿಲ್ಲೆಗಳಲ್ಲಿ ಸಂಚರಿಸಲಿರುವ ಶ್ರೀ ರಾಮ ಚಂದ್ರಾಪುರ ಮಠದ ಅಯೋಜಿತ ಮಂಗಲ ಗೋ ಯಾತ್ರೆಯು ಜಿಲ್ಲೆಯನ್ನು ಪ್ರವೇಶಿಸಿದ್ದು. ಗೋಣಿಕೊಪ್ಪದಲ್ಲಿ ರಥಕ್ಕೆ ಹಿಂದೂ ಬಾಂಧವರು ಆರತಿಯನ್ನು ಮಾಡಿ ಹಾರವನ್ನು ಹಾಕುವದರ ಮೂಲಕ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು.
ಕುಟ್ಟ ಗ್ರಾಮದ ಮೂಲಕ ಪ್ರವೇಶಿಸಬೇಕಾಗಿದ್ದ ರಥ ಯಾತ್ರೆಗೆ ಬಧ್ರ್ರತೆಯ ಕಾರಣದಿಂದ ಹಾಗೂ ಅರಣ್ಯದಲ್ಲಿ ಸಂಚರಿಸಲು ಅನುಮತಿ ದೊರೆಯದ ಕಾರಣ, ತಿತಿಮತಿ ಕಡೆಯಿಂದಲೇ ಜಿಲ್ಲೆಯನ್ನು ಪ್ರವೇಶಿಸಿದ ರಥಯಾತ್ರೆ, ನೇರವಾಗಿ ಕುಟ್ಟಕ್ಕೆ ತಲಪಿ ನಂತರ ಶ್ರೀಮಂಗಲ, ಪೊನ್ನಂಪೇಟೆ, ಗೋಣಿಕೊಪ್ಪಲನ್ನು ತಲಪಿತ್ತು. ಗೋಣಿಕೊಪ್ಪಲಿನಲ್ಲಿ ಹಿಂದೂ ಪರ ಸಂಘಟನೆಯ ಮುಖಂಡರಾದ ಗಣೇಶ್ ರೈ, ಸುರೇಶ್ ರೈ, ಯೋಗೇಶ್, ಲೋಕೇಶ್, ಗ್ರಾ.ಪಂ ಅಧ್ಯಕ್ಷೆ ಸೇಲ್ವಿ, ಸದಸ್ಯ ರಾಮಕೃಷ್ಣ, ಕಾಯೇರ ಕಿರಣ್ ಉದಯ್, ಗಣೇಶ್ ಕಾರ್ಯಕರ್ತರು ಗೋ ಯಾತ್ರೆಯ ರಥವನ್ನು ಭರಮಾಡಿಕೊಂಡರು.
ಮುಳಿಯ ಕೇಶವ ಭಟ್ ಆಂಡ್ ಸನ್ಸ್ ಸಂಸ್ಥೆಯ ವತಿಯಿಂದ ಮಳಿಗೆಯ ಮುಂಭಾಗದಲ್ಲಿ ರಥಕ್ಕೆ ಅರತಿ ಮತ್ತು ಹಾರವನ್ನು ಹಾಕುವದರ ಮೂಲಕ ಸ್ವಾಗತಕೊರಲಾಯಿತು.
ಈ ಸಂದರ್ಭ ಮುಳಿಯ ಸಂಸ್ಥೆಯ ಸಿಬ್ಬಂದಿಗಳು, ಡಾ. ಚಂದ್ರಶೇಖರ್ ಹಾಜರಿದ್ದರು. ನಂತರ ಕೈಕೇರಿಯ ಭಗವತಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸಾದ್ ಅವರಿಂದ ಅಗಮಿಸಿದ ಸರ್ವ ಭಕ್ತರಿಗೂ ಅನ್ನ ಸಂತರ್ಪಣೆ ಮಾಡಲಾಯಿತು. ರಥ ಯಾತ್ರೆಯ ಸಂದರ್ಭ ಪೊಲೀಸ್ ರಕ್ಷಣೆಯನ್ನು ಗೋಣಿಕೊಪ್ಪಲು ವೃತನಿರಿಕ್ಷಕ ರಾಜು ಅವರ ಮಾರ್ಗದರ್ಶನದಲ್ಲಿ ನೀಡಲಾಗಿತ್ತು.