ಸಿದ್ದಾಪುರ, ಡಿ. 14: ಮಾಲ್ದಾರೆ ಸಮೀಪದ ದೇವಮಚ್ಚಿ ಮೀಸಲು ಅರಣ್ಯದ ದಿಡ್ಡಳ್ಳಿಯಲ್ಲಿ 577 ಗಿರಿಜನ ಕುಟುಂಬಗಳು ನಿರ್ಮಿಸಿದ್ದ ಗುಡಿಸಲುಗಳನ್ನು ಅರಣ್ಯ ಇಲಾಖೆ ನೆಲಸಮ ಮಾಡಿದ ಬಳಿಕ ಹಾಡಿಯಲ್ಲಿ ರಾಜಕೀಯ ನಾಟಕ ಜೋರಾಗಿ ನಡೆಯುತ್ತಿದೆ.! ಹಾಡಿಗೆ ಈ ಹಿಂದೆ ಭೇಟಿ ನೀಡಿದ್ದ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಪ್ರಮುಖರು ಗಿರಿಜನರನ್ನು ಒಕ್ಕಲೆಬ್ಬಿಸುವದಿಲ್ಲವೆಂದು ಭಾಷಣ ಬಿಗಿದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಏಕಾಏಕಿ ಗುಡಿಸಲು ತೆರವು ಗೊಳಿಸಿದ್ದು, ಇದೀಗ ಹಾಡಿಯಲ್ಲಿ ಗಿರಿಜನ ಕುಟುಂಬಗಳ ಗೋಳು ಹೇಳತೀರದಾಗಿದೆ.

ಬಹುತೇಕ ಎಲ್ಲಾ ಪಕ್ಷದ ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ದಿಡ್ಡಳ್ಳಿಗೆ ಭೇಟಿ ನೀಡಿ ವಿಧÀ ವಿಧದ ಭರವಸೆಯನ್ನು ನೀಡಿ ನಿಮ್ಮೊಂದಿಗೆ ಸದಾ ನಾವಿದ್ಧೇವೆ ಎಂದು ಹೇಳಿ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ. ಆಡಳಿತ ಪಕ್ಷದ ಮುಖಂಡರುಗಳು ಸರಕಾರದ ಗಮನಕ್ಕೆ ತರಲಾಗುವದು , ಶಾಶ್ವತ ಸೂರು ಒದಗಿಸಲಾಗುವದು ಎಂದು ಭರವಸೆ ನೀಡಿದರೆ, ವಿರೋಧ ಪಕ್ಷದ ಮುಖಂಡರುಗಳು ಸರಕಾರದ ವಿರುದ್ಧ ಪ್ರತಿಭಟನೆ ನಡೆಸೋಣವೆಂದು ಭಾಷಣ ಮಾಡುತ್ತಿರುವದು ಕಂಡುಬರುತ್ತಿದೆ. ಕೆಲ ಪಕ್ಷದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ನಿಮ್ಮ ಪ್ರತಿಭಟನೆಗೆ