ಸೋಮವಾರಪೇಟೆ, ಜ. 28: ಇಲ್ಲಿನ ಕೃಷಿ ಇಲಾಖೆಯಿಂದ ಕೊಡಮಾಡುವ 2015-16ನೇ ಸಾಲಿನಲ್ಲಿ ತಾಲೂಕಿನ ಭತ್ತ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಭತ್ತ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದ ದ್ವಿತೀಯ ಸ್ಥಾನವನ್ನು ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಗ್ರಾಮದ ಸುಲ್ತಾನ್ ಮೊಹಿದ್ದಿನ್ ಶಬ್ಬೀರ, ತೃತೀಯ ಸ್ಥಾನವನ್ನು ಶನಿವಾರಸಂತೆ ನಾಗವಾರ ಗ್ರಾಮದ ಎನ್.ಸಿ. ಉರಿಯಪ್ಪ ಗಳಿಸಿದ್ದಾರೆ.

ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಯಡವಾರೆ ಗ್ರಾಮದ ಈರಪ್ಪ ಪ್ರಥಮ ಸ್ಥಾನ, ಕುಶಾಲನಗರ ಹೊಸಪಟ್ಟಣದ ಚನ್ನವೀರಪ್ಪ ದ್ವಿತೀಯ ಹಾಗೂ ಶನಿವಾರಸಂತೆ ಮೈಲಾತಪುರದ ರವೀಶ್ ತೃತೀಯ ಸ್ಥಾನಗಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಅಪ್ಪಚ್ಚು ರಂಜನ್, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಸದಸ್ಯೆ ತಂಗಮ್ಮ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ವನಜಾ ಸೇರಿದಂತೆ ಇತರರು ವಿಜೇತರಿಗೆ ಬಹುಮಾನ ವಿತರಿಸಿದರು.