ಸಿದ್ದಾಪುರ, ಜ. 16: ಕೊಡುಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ ಜಿಲ್ಲಾ ಸಮಾವೇಶ ಹಾಗೂ ಕುಟುಂಬ ಸಂಗಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆಲ್ಯಹುದಿಕೇರಿಯಲ್ಲಿ ನಡೆಯಿತು.

ಸಮಾವೇಶ ಅಂಗವಾಗಿ ಕಾವೇರಿ ಸೇತುವೆ ಬಳಿಯಿಂದ ತಾಲಪೊಲಿ ಮತ್ತು ಚಂಡೆಮೇಳದೊಂದಿಗೆ ಮೆರವಣಿಗೆ ಮೂಲಕ ಗೋಶ ಯಾತ್ರೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಧಾರ್ಮಿಕ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕೊಡುಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ ಜಿಲ್ಲಾಧ್ಯಕ್ಷ ವಿ.ಎನ್ ಕಿಶನ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬ ಸಂಗಮ ಕಾರ್ಯಕ್ರಮವನ್ನು ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೊಕೇಶ್ ಉದ್ಘಾಟಿಸಿದರು.

ಈ ಸಂದರ್ಭ ಸಂಘದ ಜಿಲ್ಲಾ ರಕ್ಷಾಧಿಕಾರಿ ಪಿ.ಆರ್. ಶಿವದಾಸ್ ಸ್ವಾಮಿ, ಪ್ರಮುಖರಾದ ಟಿ.ಎಂ. ಮೋಹನನ್, ಜಿ.ಎ. ಶಶಿಧರ್, ಎಂ.ಕೆ. ಸುಂದರನ್, ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಡಿ. ಚೀಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಎ.ಕೆ. ಹಕೀಂ, ಹೊಸಪಟ್ಟಣ ಗ್ರಾಮದ ಎಂ. ಲೋಕನಾಥ್, ಕೊಡುಙಲ್ಲೂರ್ ಕ್ಷೇತ್ರದ ಮುಖ್ಯ ರಕ್ಷಣಾಧಿಕಾರಿ ಸಿ.ಬಿ. ಶೈಬು, ರಾಜ್ಯಾಧ್ಯಕ್ಷೆ ಸುಭದ್ರ ವೆಳಿಚಪಾಡ್, ಪ್ರಧಾನ ಕಾರ್ಯದರ್ಶಿ ಶಿಬುಸ್ವಾಮಿ, ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಗಿರೀಶ್ ಭಗವತಿ, ಜಿಲ್ಲಾ ಆಚರಣಾ ಸಮಿತಿ ಅಧ್ಯಕ್ಷ ಪಿ.ಎಂ ದಿಲೀಪ್, ಕಾರ್ಯದರ್ಶಿ ಆರ್. ಪ್ರಕಾಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.