*ಗೋಣಿಕೊಪ್ಪಲು, ಅ. 17: ಕಾಡ್ಲಯ್ಯಪ್ಪ ದಸರಾ ಸಮಿತಿ ಮತ್ತು ಸ್ನೇಹಿತರ ಬಳಗ ಅರುವತ್ತೋಕ್ಲು ಅವರ ವತಿಯಿಂದ 11ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಸಂಚಾರ ನಿಯಂತ್ರಣ ಬ್ಯಾರಿಕೇಡ್ನ್ನು ಇಲ್ಲಿನ ಸರ್ವದೈವತಾ ಶಾಲಾ ಮುಂಭಾಗದಲ್ಲಿ ಅಳವಡಿಸಲಾಯಿತು.
ಸರ್ವದೈವತಾ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಾಲ್ಕು ಬ್ಯಾರಿಕೇಡ್ ಗಳನ್ನು ಅಳವಡಿಸ ಲಾಯಿತು. ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆಯಾದ್ದರಿಂದ ಇಲ್ಲಿ ಜನಸಂದಣಿ ಹೆಚ್ಚಿದೆ. ಎರಡು ಪ್ರಮುಖ ವಿದ್ಯಾ ಸಂಸ್ಥೆಗಳು ಇಲ್ಲಿವೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚು ಅಪಘಾತಗಳು ನಡೆಯುವ ಸಂಭವವಿದೆ. ಈ ಕಾರಣದಿಂದ ಈ ಬ್ಯಾರಿಕೇಡನ್ನು ನಿರ್ಮಿಸಲು ಕಾಡ್ಲಯ್ಯಪ್ಪ ದಸರಾ ಸಮಿತಿ ಮುಂದಾಗಿದೆ ಎಂದು ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ತಿಳಿಸಿದ್ದಾರೆ.
ಉದÀ್ಯಮಿ ಕುಂಚಟ್ಟಿರ ವಸಂತ್ ಪೂಣಚ್ಚ, ದಸರಾ ಸಮಿತಿ ಗೌರವ ಅಧ್ಯಕ್ಷ ಕರುಂಬಯ್ಯ, ಉಪಾಧ್ಯಕ್ಷ ಎ.ಕೆ.ವಿಕ್ರಮ್, ಪ್ರಧಾನ ಕಾರ್ಯದರ್ಶಿ ಸಾಜಿ ಅಚ್ಚುತ್ತನ್. ಖಜಾಂಚಿ ಬಿ.ಎನ್. ಪ್ರಕಾಶ್, ಕೊಡಗು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ಸ್ನೇಹಿತರ ಬಳಗ ಅಧ್ಯಕ್ಷ ಸುನಿಲ್ ಕುಮಾರ್, ಉಪಾಧ್ಯಕ್ಷ ವೇಣು, ಕಾರ್ಯದರ್ಶಿ ಬಿ.ಜೆ.ಇಂದ್ರೇಶ್, ಸಹಕಾರ್ಯದರ್ಶಿ ನಿತಿನ್ ಕುಮಾರ್, ಖಜಾಂಚಿ ಸುಬ್ರಮಣಿ ಹಾಜರಿದ್ದರು.