ಮಡಿಕೇರಿ, ಆ. 2: ಕಡಗದಾಳು - ಚಾಮುಂಡೇಶ್ವರಿ ಕಾಲೋನಿ ನಿವಾಸಿ, ಹೆಚ್.ಟಿ. ವಿಜಯಕುಮಾರ್ ಅವರ ಪುತ್ರ ಕೆ.ವಿ. ಅಭಿಲಾಶ್ (24) ಇಂದು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.ಅಭಿಲಾಶ್ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಸ್ನೇಹಿತ ಆಂಧ್ರ್ರ ಮೂಲದ ಮೆಹಬೂಬ್ (26) ಜೊತೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಪೊಲೀಸ್ ಕ್ರೇನ್ ಲಾರಿಗೆ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಅಭಿಲಾಶ್‍ನ ಮೃತದೇಹವನ್ನು ತಾ. 3ರಂದು (ಇಂದು) ಸ್ವಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅಭಿಲಾಷ್ ಬೆಂಗಳೂರಿನ ಕಸ್ಟಮ್ಸ್‍ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.