ಮಡಿಕೇರಿ, ಜು. 29: ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅವಘಡ ವೊಂದರಲ್ಲಿ ಕೊಡಗಿನ ಯುವಕನೋರ್ವ ಸೇರಿದಂತೆ ಇಬ್ಬರು ದುರ್ಮರಣ ಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಬಿರುನಾಣಿ ಗ್ರಾಮದ ನೆಲ್ಲೀರ ಅಜಿತ್ ಹಾಗೂ ನವೀನ ದಂಪತಿ ಯ ಪುತ್ರ ಶಾನ್ ಸುಬ್ಬಯ್ಯ (19) ಹಾಗೂ ಆತನ ಸ್ನೇಹಿತ ಗದಗ್ನ ಮತ್ತೋರ್ವ ಯುವಕ ಮೃತಪಟ್ಟ ವರಾಗಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಅವಘಡ ಸಂಭವಿಸಿದೆ. ಶಾನ್ ಸುಬ್ಬಯ್ಯ ಬೆಂಗಳೂರಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಸಂಜೆ ಗದಗ್ ಜಿಲ್ಲೆಯ ಸಹಪಾಠಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಎಲೆಕ್ಟ್ರಾನಿಕ್ ಸಿಟಿ ಸನಿಹ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ದುರ್ಮರಣಗೊಂಡಿದ್ದಾರೆ. ಶಾನ್ ಅಂತ್ಯಕ್ರಿಯೆ ಇಂದು ಬಿರುನಾಣಿಯಲ್ಲಿ ನೆರವೇರಿತು.