ಆಲೂರು-ಸಿದ್ದಾಪುರ, ಜು. 23: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಈ ನಾಯಿಗಳನ್ನು ಹಿಡಿದು ಬೇರೆಡೆಗೆ ಬಿಡುವ ಕೆಲಸವನ್ನು ಮಾಡದೆ ನಿದ್ರೆಯಲ್ಲಿದ್ದಂತಿದೆ.
ಈ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳು ಹೆಚ್ಚಿರುವದರಿಂದ, ಬಿಸಿಯೂಟ ಶಾಲೆಗಳಲ್ಲಿ ನೀಡುವದರಿಂದ ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಶಾಲೆಗಳಲ್ಲಿ ಕಾಣಿಸಿಕೊಳ್ಳುವ ಬೀದಿ ನಾಯಿಗಳು ಶಾಲಾ ಮಕ್ಕಳ ಮೇಲೆ ಎಗರುತ್ತಿವೆ. ಪ್ರತಿನಿತ್ಯ ವಿದ್ಯಾರ್ಥಿಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ಕಚ್ಚುವ ಪ್ರಯತ್ನವನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳು ಈ ಬೀದಿ ನಾಯಿಗಳಿಗೆ ಭಯಪಟ್ಟು ಶಾಲೆಗಳಿಗೆ ಬರಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
- ದಿನೇಶ್ ಮಾಲಂಬಿ.