ಸುಂಟಿಕೊಪ್ಪ, ಆ.1: ಸುಂಟಿಕೊಪ್ಪ ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ಮುಖೇಶ್ (ಮಣಿ) ಪ್ರಧಾನ ಕಾರ್ಯದರ್ಶಿಯಾಗಿ ವೆಂಕಪ್ಪ ಪೂಜಾರಿ ಆಯ್ಕೆ ಆಗಿದ್ದಾರೆ.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ 4ನೇ ವರ್ಷದ ವಾರ್ಷಿಕ ಮಹಾಸ¨ sÉಯನ್ನು ಬಿ.ಕೆ.ಮೋಹನ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸ ಲಾಗಿದ್ದು ಈ ಸಭೆಯಲ್ಲಿ ನೂತನ ಪದಾಧಿಕಾರಿ ಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ಟಿ.ರಮೇಶ್ ಪೂಜಾರಿ, ಬಿ.ಎಸ್.ದೇವಪ್ಪ ಪೂಜಾರಿ, ಗೀತಾ ವಿಶ್ವನಾಥ್, ಎಂ.ಎಸ್. ಸುನೀಲ್, ಬಿ.ಪಿ.ವಿಜಯ ಪೂಜಾರಿ, ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ಬಿ.ಎಂ. ಹರೀಶ್ ಪೂಜಾರಿ, ಸಹಕಾರ್ಯದರ್ಶಿ ಬಿ.ಆರ್. ಲಕ್ಷ್ಮಣ ಪೂಜಾರಿ, ಖಜಾಂಜಿ ಬಿ.ಎಂ. ಚಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಇ. ಸತೀಶ್ ಪೂಜಾರಿ ಮಳ್ಳೂರು, ಪದ್ಮನಾಭ ಪೂಜಾರಿ ಕುಂಬಾರ ಬಾಣೆ, ತೇಜಸ್ ಪೂಜಾರಿ ಹರದೂರು, ಹರೀಶ್ ಪೂಜಾರಿ ಯಡವಾರೆ, ಮಹೇಶ್ ಪೂಜಾರಿ ಮಾದಾಪುರ, ಮಿಲ್ಲನ್ ಪೂಜಾರಿ ಕೊಡಗರಹಳ್ಳಿ, ನಾಗೇಶ್ ಪೂಜಾರಿ ತೊಂಡೂರು, ಮಾಧ್ಯಮ ವಕ್ತಾರರಾಗಿ ಬಿ.ಎಂ. ಮಂಜುನಾಥ್ ಪೂಜಾರಿ ಆಯ್ಕೆ ಆಗಿದ್ದಾರೆ.