ನಾಪೆÉÇೀಕ್ಲು, ಡಿ. 10: ಸಮೀಪದ ಬಲ್ಲಮಾವಟಿ ಪಿಂಚಣಿದಾರರ ಕಟ್ಟಡದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಬಲ್ಲಮಾವಟಿ ಸ್ಥಾನೀಯ ಸಮಿತಿ ವ್ಯಾಪ್ತಿಯ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮೂವೇರ ಪ್ರಕಾಶ್, ಎಡಿಕೇರಿ ಸನ್ನಿ ಉತ್ತಪ್ಪ, ಅಪ್ಪಚ್ಚಿರ ದಿನು ತಿಮ್ಮಯ್ಯ, ಅಪ್ಪಚೆಟ್ಟೋಳಂಡ ಜೋಯಪ್ಪ, ಮೂವೇರ ಸೀತಮ್ಮ, ವೀರಪ್ಪ, ಮಚ್ಚುರ ಪ್ರಕಾಶ್, ತೆಕ್ಕಬೊಟ್ಟೋಳಂಡ ಶ್ಯಾಂ ಪೂವಣ್ಣ, ಅರುಣ, ಮುಕ್ಕಾಟಿರ ವಿನಯ್, ಮಾಳೆಯಂಡ ಜಗದ ಈರಪ್ಪ, ಕೋಟೆರ ಅಶೋಕ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕನಸನ್ನು ನನಸು ಮಾಡಬೇಕಾಗಿರುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಿಜೆಪಿ ಆಡಳಿತದಿಂದ ಮಾತ್ರ ಅಭಿವೃದ್ಧಿ ಹಾಗೂ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಮಾತನಾಡಿದರು. ಈ ಸಂದರ್ಭ ಕೇಂದ್ರ ವಿಜಿಲೆನ್ಸ್ ಸಮಿತಿಗೆ ಆಯ್ಕೆಯಾದ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನೀಯ ಸಮಿತಿ ಅಧ್ಯಕ್ಷ ಮಾಳೆಯಂಡ ಅಯ್ಯಪ್ಪ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ, ಕಾಳನ ರವಿ, ಕೋಡಿರ ಪ್ರಸನ್ನ, ಕರವಂಡ ಲವ ನಾಣಯ್ಯ, ಅಪ್ಪಣ್ಣ, ಚಂಗೇಟಿರ ಕುಮಾರ್ ಸೋಮಣ್ಣ, ಚೋಕಿರ ಬಾಬಿ ಭೀಮಯ್ಯ ಮತ್ತಿತರರು ಇದ್ದರು.