ಸುಂಟಿಕೊಪ್ಪ, ಅ. 3: ಭಾರತೀಯ ಸೈನಿಕರು ಉಗ್ರರ ನೆಲೆಗೆ ನುಗ್ಗಿ ಉಗ್ರವಾದಿಗಳನ್ನು ಹತ್ಯೆ ಮಾಡಿದ ಹಿನ್ನೇಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಇಲ್ಲಿನ ಕನ್ನಡ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಭಾರತೀಯ ಯೋಧರ ಪರ ಘೋಷಣೆಯನ್ನು ಕೂಗುತ್ತಾ ಸಂಭ್ರಮಿಸಿದರು.
ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನವು ಸ್ವತ; ಉಗ್ರಗಾಮಿಗಳನ್ನು ಹುಟ್ಟುಹಾಕಿ ಭಾರತದ ಮೇಲೆ ಧಾಳಿ ನಡೆಸುತ್ತಿದೆ. ಉರಿಯಲ್ಲಿ ಉಗ್ರಗಾಮಿಗಳು ನಡೆಸಿದ ಭಯೋತ್ಪಾದಕ ಕುಕೃತ್ಯದಿಂದ ಭಾರತದ ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಉರಿ ಧಾಳಿಗೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಯೋಧರು ನೀಡಿದ್ದಾರೆ ಎಂದರು. ಸುಂಟಿಕೊಪ್ಪ ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಮಾಜಿ ಬಿಜೆಪಿ ನಗರಾಧ್ಯಕ್ಷ ಬಿ.ಕೆ.ಮೋಹನ್, ತಾ.ಪಂ ಸದಸ್ಯೆ ವಿಮಲಾವತಿ, ಗ್ರಾ.ಪಂ.ಸದಸ್ಯರಾದ ಬಿ.ಎಂ.ಸುರೇಶ್, ಗಿರೀಜ ಉದಯಕುಮಾರ್, ಸಿ.ಚಂದ್ರ, ಬಿಜೆಪಿ ನಗರ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್, ಬಿಜೆಪಿ ಮುಖಂಡರಾದ ದಾಸಂಡ ರಮೇಶ್, ವಿ.ಎಂ. ಸೋಮಯ್ಯ, ಬಿ.ಐ.ಭವಾನಿ, ಪಟ್ಟೆಮನೆ ಉದಯಕುಮಾರ್, ವಾಸು, ಬಿ.ಕೆ.ಗಿರೀಶ್, ಕಾರ್ಯಕರ್ತರಾದ ಟಿ.ಕೆ.ವಿನೋದ್, ರಂಜಿತ್ ಪೂಜಾರಿ, ರಮೇಶ್ ರೈ, ವರ್ಷಿತ್, ಸುದೀಶ್, ಸುದೇಶ್ ಕುಮಾರ್, ಮಿಥುನ್, ಮುರುಗೇಶ್ ಇನ್ನಿತರರು ಇದ್ದರು.