ಮಡಿಕೇರಿ, ನ.18 : ಬಿಜೆಪಿಯೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಕಾಂಗ್ರೆಸ್ಸಿಗರಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಮೂರನೇ ಶಕ್ತಿಯನ್ನು ರಚಿಸುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷÀತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಸಾರ್ವಜನಿಕರ ಸ್ವತ್ತಾಗಿರುವದರಿಂದ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡುತ್ತಿರುವದಾಗಿ ಸಮರ್ಥಿಸಿಕೊಂಡರು. ಇತ್ತೀಚೆಗೆ ಕೊಡವೇತರ ಕಾಂಗ್ರೆಸ್ಸಿಗರ ಸಭೆÉ ನಡೆದಿದ್ದು, ಕೊಡವೇತರರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆನ್ನುವ ಅಭಿಪ್ರಾಯ ಕೇಳಿ ಬಂದಿದೆ. ಟಿಪ್ಪು ಜಯಂತಿ ಪರವಾಗಿದ್ದ ಸರಿತಾ ಪÀÇಣಚ್ಚ ಹಾಗೂ ನಾಪಂಡ ಮುತ್ತಪ್ಪ ಅವರು ಅಧ್ಯಕ್ಷರಾಗಬಾರದೆನ್ನುವ ಉದ್ದೇಶವೂ ಪಕ್ಷದಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಕೆಲವು ಕಾಂಗ್ರೆಸ್ಸಿಗರು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೆ ಪರೋಕ್ಷವಾಗಿ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿದ್ದಾರೆ. ಈ ರೀತಿಯ ಕಾಂಗ್ರೆಸ್ಸಿಗರಿಗೆ ಅಧ್ಯಕ್ಷ ಸ್ಥಾನ ಅಥವಾ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನ ನೀಡಿದರೆ ಕಾಂಗ್ರೆಸ್ಗೆ ಸೋಲು ಖಚಿತವೆಂದು ಸುಬ್ಬಯ್ಯ ಅಭಿಪ್ರಾಯಪಟ್ಟರು. ಕಮಲ ಕಾಂಗ್ರೆಸ್ಸಿಗರಿಗೆ ಅಧ್ಯಕ್ಷ ಸ್ಥಾನ ದೊರೆತರೆ ಮೂರನೇ ಶಕ್ತಿ ಉದಯಿಸಲಿದೆ ಯೆಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಹಾಗೂ ಅರಣ್ಯ ಉತ್ಪನ್ನಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÀÇನ್ನಪ್ಪ ಅವರುಗಳು ಬಿಜೆಪಿ ಯೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡದ್ದಕ್ಕಾಗಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಲಿಲ್ಲವೆಂದು ಸುಬ್ಬಯ್ಯ ಆರೋಪಿಸಿದರು.
ಮೂರನೇ ಶಕ್ತಿಯಾಗಿ ಸಾರ್ವಜನಿಕ ಹೋರಾಟದ ಮಹಾ ಮೈತ್ರಿ ಕೂಟವನ್ನು ರಚಿಸುವ ಬಗ್ಗೆ ನಿರ್ಧಾರದ ಕುರಿತು ಸಮಾನ ಮನಸ್ಕರೊಂದಿಗೆ ಚರ್ಚಿಸುವದಾಗಿ ಇದೇ ಸಂದರ್ಭ ಸುಬ್ಬಯ್ಯ ತಿಳಿಸಿದರು.
ರೂ.500 ಹಾಗೂ ಸಾವಿರ ಮುಖಬೆಲೆಯ ನೋಟ್ಗಳನ್ನು ರದ್ದು ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನು ಖಂಡಿಸಿದ ಎ.ಕೆ. ಸುಬ್ಬಯ್ಯ, ಪ್ರಧಾನಿ ನಿರ್ಧಾರದಿಂದಾಗಿ ಹಿರಿಯ ನಾಗರಿಕರು, ಜನಸಾಮಾನ್ಯರು, ವೃದ್ಧರು, ಬಡವರು ಸೇರಿದಂತೆ 30 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಅವರೇ ನೇರ ಕಾರಣಕರ್ತರೆಂದು ಆರೋಪಿಸಿ ಕಪ್ಪು ಹಣ ದಂಧೆಯಲ್ಲಿ ತೊಡಗಿರುವವರು ಎಲ್ಲೂ ಪ್ರಾಣ