ನಾಪೆÉÇೀಕ್ಲು, ನ. 17: ಗ್ರಾಮ ಪಂಚಾಯಿತಿ ವಾರ್ಷಿಕ ಟೆಂಡರ್‍ನಲ್ಲಿ ಮಾರಾಟ ಪರವಾನಿಗೆ ಹೊಂದಿದ ಹಲವು ಬಿಡ್ಡುದಾರರು ಬಿಡ್ಡಿನ ಬಾಕಿ ಹಣ ಪಂಚಾಯಿತಿಗೆ ಸಂದಾಯ ಮಾಡಲು ಬಾಕಿಯಿದ್ದು, ಮುಂದಿನ 7 ದಿನಗಳೊಳಗೆ ಪಂಚಾಯಿತಿಗೆ ಸಂದಾಯ ಮಾಡದಿದ್ದರೆ ಕಾನೂನಿನ ಪ್ರಕಾರ ಸಂಬಂಧಿಸಿದ ಅಂಗಡಿಗಳನ್ನು ಜಪ್ತಿ ಮಾಡಲಾಗುವದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಎಚ್ಚರಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಬಾಕಿದಾರರಿಗೆ ಕಾನೂನಿನಂತೆ 3 ಬಾರಿ ನೋಟೀಸು ಜಾರಿ ಮಾಡಿದರೂ ಯಾವದೇ ಸ್ಪಂದನ ದೊರಕಿಲ್ಲ. ಆದ ಕಾರಣ ಸರ್ವ ಸದಸ್ಯರ ಸಮ್ಮತದೊಂದಿಗೆ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದರು. ಅದರಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿಯಿಂದ ಪರವಾನಿಗೆ ಪಡೆಯದೆ ವ್ಯಾಪಾರ ಮಾಡುವದರ ಬಗ್ಗೆ ತಿಳಿದು ಬಂದಿದೆ. ಕೂಡಲೇ ಪರವಾನಿಗೆ ಪಡೆಯಬೇಕು. ತಪ್ಪಿದ್ದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.

ಈಗ 500- 1000 ರೂ.ಗಳ ಮೇಲೆ ನಿರ್ಬಂದ ಹೇರಿರುವ ಹಿನ್ನಲೆಯಲ್ಲಿ ಬಾಕಿದಾರರಿಗೆ ಹಣ ಸಂದಾಯ ಮಾಡಲು ಸಮಸ್ಯೆಯಾದರೆ ಹಳೇ ನೋಟುಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಪಡೆಯ ಲಾಗುವದು ಎಂದು ಹೇಳಿದರು. ಗ್ರಾಮ ಪಂಚಾಯಿತಿಯ ಸಾರ್ವಜನಿಕ ಶೌಚಾಲಯವನ್ನು ಆಧುನಿಕಣ ಗೊಳಿಸುವ ನಿಟ್ಟಿನಲ್ಲಿ ಹಳೇ ಶೌಚಾಲಯವನ್ನು ನೆಲಸಮ ಗೊಳಿಸಲಾಗಿದ್ದು, ಮುಂದಿನ 20 ದಿನಗಳ ಒಳಗೆ ನೂತನ ಶೌಚಾಲಯ ವನ್ನು ನಿರ್ಮಿಸ ಲಾಗುವದೆಂದು ಈ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಮುತ್ತುರಾಣಿ ಅಚ್ಚಪ್ಪ, ಕುಲ್ಲೇಟಿರ ಜ್ಯೋತಿ ನಾಚಪ್ಪ, ಟಿ.ಎ.ಮಹಮ್ಮದ್, ಮಹಮ್ಮದ್ ಖುರೇಶಿ, ಶಹನಾಜ್, ಆಮೀನಾ ಎಂ.ಎಂ, ಪುಲ್ಲೇರ ಪದ್ಮಿನಿ, ಕುಶು ಕುಶಾಲಪ್ಪ, ಬಿ.ಕೆ.ಸುಶೀಲ, ಟಿ.ಆರ್.ಮೋಹಿನಿ, ಬಿ.ಎಂ. ಶರೀನ, ಟಿ.ಹೆಚ್.ಅಹಮ್ಮದ್, ಅಬ್ದುಲ್ ಅಜೀಜ್, ಪಿ.ಸಿ.ಅಕ್ಕಮ್ಮ, ಚೋಕಿರ ರೋಶನ್, ಪಿ.ಎಂ.ರಶೀದ್, ವನಜಾಕ್ಷಿ, ಪಿ.ಡಿ.ಓ. ಕೇಶವ ಮತ್ತಿತರರಿದ್ದರು.