ಗುಡ್ಡೆಹೊಸೂರು, ನ. 21: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ 63ನೇ ಸಹಕಾರಿ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಎಸ್.ಎನ್. ರಾಜರಾವ್ ವಹಿಸಿದ್ದರು. ಸಹಕಾರ ಮಹಾ ಮಂಡಳಿಯ ನಿರ್ದೇಶಕ ಮನು ಮುತ್ತಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಪುಷ್ಪ ಗುಡ್ಡೆಹೊಸೂರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾದ ಎಸ್.ಪಿ. ಲಿಂಗಪ್ಪ ಮತ್ತು ಎಂ. ಬಿ. ಜೋಯಪ್ಪ ಜಿಲ್ಲಾ ಸಹಕಾರ ಯುನಿಯನ್ ಬಲ್ಲಾರಂಡ ಮಣಿ ಉತ್ತಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್. ಚಂದ್ರಶೇಖರ್ ಮತ್ತು ನಂಜರಾಯಪಟ್ಟಣ ಮತ್ತು ಬಸವನಹಳ್ಳಿ ಸಹಕಾರ ಸಂಘದ ನಿರ್ದೇಶಕರು ಹಾಜರಿದ್ದರು. ನಿವೃತ ಪ್ರಾಂಶುಪಾಲ ಗುರುಮಲ್ಲಪ್ಪ ಸಪ್ತಾಹದ ಅಂಗವಾಗಿ ಮತ್ತು ಸಪ್ತಾಹ ನಡೆಸುವ ಉದ್ದೇಶದ ಬಗ್ಗೆ ಮಾತನಾಡಿದರು.
ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಯೋಗೇಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಪ್ರಾರ್ಥಿಸಿದರು. ಬಸವನಹಳ್ಳಿ ಸಂಘದ ನಿರ್ದೇಶಕ ಬಿ.ಕೆ. ಮೋಹನ ಸ್ವಾಗತಿಸಿದರು. ಯೋಗೇಂದ್ರ ವಂದಿಸಿದರು. ಈ ಸಂದರ್ಭ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.
- ಗಣೇಶ್ ಕುಡೆಕ್ಕಲ್