ಮಡಿಕೇರಿ, ಡಿ. 28: ಅನಾಥ ಹಾಗೂ ನಿರ್ಗತಿಕರ ಸಂಪೂರ್ಣ ರಕ್ಷಣೆ ಪ್ರತಿಯೋರ್ವ ಪ್ರಜೆಯ ಕರ್ತವ್ಯವಾಗಿದೆ ಎಂದು ಸೂಫಿವರ್ಯ ಸಯ್ಯದ್ ಫಝಲ್ ಕೋಯಮ್ಮ ಅಭಿಪ್ರಾಯಪಟ್ಟಿದ್ದಾರೆ.

ಕುಂಜಿಲ ಪಯ್‍ನರಿ ಮುಸ್ಲಿಂ ಜಮಾಅತ್ ಅಧೀನದ ಪಯ್‍ನರಿ ರಿಲೀಫ್ ಫಂಡ್‍ನ ವತಿಯಿಂದ ನಡೆದ ಅನಾಥ ನಿರ್ಗತಿಕ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೆ.ಸಿ. ರೋಡ್ ಅಲ್‍ಹಾಜ್ ಹುಸೇನ್ ಹಾಜಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಎ.ಎ. ಮಹಮ್ಮದ್ ಹಾಜಿ ವಹಿಸಿದ್ದರು. ಕಣ್ಣೂರಿನ ನಿರಾಜುಲ್ ಹುದಾ ಕಾಲೇಜಿನ ಪ್ರಾಂಶುಪಾಲ ಅಬ್ಬುರ್ರಶೀದ್ ದಾರಿಮಿ ಉದ್ಘಾಟಿಸಿದರು. ಜಿಲ್ಲಾ ನಾಯಿಬ್ ಖಾಝಿ ಮಹಮ್ಮದ್ ಮುಸ್ಲಿಯಾರ್, ಅಬೂ ಸಯೀದ್ ಮೌಲವಿ ನಾಸಿಕ್ ಮಕ್ಕಿ, ಪಯ್ಯಡಿ ಹಂಝ, ಕೆಎಸ್‍ಆರ್‍ಟಿಸಿ ನಿಗಮದ ನಿರ್ದೇಶಕರಾದ ಸೌಕತ್ ಆಲಿ, ರಿಲೀಫ್ ಫಂಡ್ ಅಧ್ಯಕ್ಷ ಟಿ.ಯು. ಹಂಝ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಫೈಜರ್ ಜೌಹರಿ ಸ್ವಾಗತಿಸಿದರೆ, ರಿಲೀಫ್ ಫಂಡ್ ಕಾರ್ಯದರ್ಶಿ ಸಿರಾಜುದ್ದೀನ್ ವಯಾಕೋಲ್ ವಂದಿಸಿದರು. ಸಮಾರಂಭದಲ್ಲಿ ಇಬ್ಬರು ನಿರ್ಗತಿಕ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹವನ್ನು ಸ್ಥಳೀಯ ಮುದರ್ರಿಸ್ ಅಬ್ದುಲ್ಲ ಸಅದಿ ನೆರವೇರಿಸಿದರು.